ದೆಹಲಿ,18 ಅಕ್ಟೋಬರ್ :
ಆ್ಯಂಕರ್ :
ಹಬ್ಬಗಳ ಋತುವಿನ ಹಿನ್ನೆಲೆಯಲ್ಲಿ ಗ್ರೂಪ್-ಸಿ ಮತ್ತು ನಾನ್ಗಜೆಟೆಡ್ ಗ್ರೂಪ್-ಬಿ ಶ್ರೇಣಿಯ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ, ಗರಿಷ್ಟ ೭ ಸಾವಿರ ರೂಪಾಯಿ ಮಿತಿಯ ಬೋನಸ್ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹಣಕಾಸು ಸಚಿವಾಲಯ ಕಚೇರಿಯ ಜ್ಞಾಪಕ ಪತ್ರದಲ್ಲಿ ೨೦೨೨-೨೩ರ ಹಣಕಾಸು ವರ್ಷಕ್ಕಾಗಿ ಕೇಂದ್ರ ಸರ್ಕಾರಿ ನೌಕರರಿಗೆ ೩೦ ದಿನಗಳಿಗೆ ಸಮಾನವಾದ ಅನುತ್ಪಾದಕ ಸಂಬಂಧಿತ ಬೋನಸ್ ವೇತನ ನೀಡಲು ಅನುದಾನಕ್ಕೆ ಮಂಜೂರಾತಿ ನೀಡಿದೆ ಎಂದು ಸಚಿವಾಲಯ ತಿಳಿಸಿದೆ. ಈ ಆದೇಶದಡಿಯಲ್ಲಿ ತಾತ್ಕಾಲಿಕ ಬೋನಸ್ ವೇತನವನ್ನು ಕೇಂದ್ರ ಅರೆಸೇನಾಪಡೆಗಳು ಹಾಗೂ ಸಶಸ್ತ್ರ ಪಡೆಗಳ ಅರ್ಹ ನೌಕರರಿಗೂ ನೀಡಲು ಅವಕಾಶವಿದೆ. ಈ ಸಾಲಿನ ಮಾರ್ಚ್ ೩೧ರವರೆಗೆ ಸೇವೆ ಸಲ್ಲಿಸಿದ ಮತ್ತು ೨೦೨೨-೨೩ರ ಅವಧಿಯಲ್ಲಿ ಕನಿಷ್ಠ ೬ ತಿಂಗಳವರೆಗೆ ನಿರಂತರ ಸೇವೆ ಸಲ್ಲಿಸಿದ ಅಧಿಕಾರಿಗಳೂ ಕೂಡ ಈ ವೇತನ ಪಡೆಯಲು ಅರ್ಹರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ೩ ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಕಚೇರಿಗಳಲ್ಲಿ ಪ್ರತಿ ವರ್ಷ ಕನಿಷ್ಠ ೨೪೦ ದಿನಗಳವರೆಗೆ ವಾರದಲ್ಲಿ ೬ ದಿನಗಳವರಗೆ ಸೇವೆ ಸಲ್ಲಿಸಿದ ಹಂಗಾಮಿ ಕಾರ್ಮಿಕರೂ ಈ ಅನುತ್ಪಾದಕತೆ ಸಂಬಂಧಿತ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
