ದೆಹಲಿ, 9 ಜನವರಿ(ಹಿ.ಸ):
ಆ್ಯಂಕರ್ :
ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಸಂತಸ ವ್ಯಕ್ತಪಡಿಸಿದ್ದಾರೆ. ‘ಈ ಕ್ಷಣವನ್ನು ವಿವರಿಸಲು ನನಗೆ ಸಾಧ್ಯವಿಲ್ಲ ಕನಸುಗಳು ನನಸಾಗುತ್ತವೇ ಎಂದು ನಾನು ಹೇಳಬಲ್ಲೆ ಅಷ್ಟೇ. ಇದು ನನ್ನ ಜೀವನದ ದೊಡ್ಡ ಸಾಧನೆ ಅಥವಾ ಕಠಿಣ ಪರಿಶ್ರಮದ ಫಲಿತಾಂಶ ಎಂದು ಹೇಳಬಹುದು.ನನಗೆ ಅರ್ಜುನ್ ಪ್ರಶಸ್ತಿ ನೀಡುತ್ತಿರೋದಕ್ಕೆ ತುಂಬಾ ಖುಷಿ ಆಗ್ತಿದೆ ಎಂದು ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ.
2023 ಏಕದಿನ ವಿಶ್ವಕಪ್ನಲ್ಲಿ ಮೊಹ್ಮದ್ ಶಮಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದರು. ಪರಿಣಾಮ ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡಿತ್ತು. ವಿಶ್ವಕಪ್ನಲ್ಲಿ ಒಟ್ಟು 24 ವಿಕೆಟ್ ಪಡೆದು ಮಿಂಚಿದ್ದರು. 2013ರಿಂದ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡುತ್ತಿರುವ ಶಮಿ, ಭಾರತದ 101 ಮ್ಯಾಚ್ ಆಡಿದ್ದಾರೆ. ಒಟ್ಟು 195 ವಿಕೆಟ್ಗಳನ್ನು ಕಬಳಿಸಿದ್ರೆ, ಟೆಸ್ಟ್ನಲ್ಲಿ 64 ಪಂದ್ಯಗಳನ್ನು ಆಡಿ 229 ವಿಕೆಟ್ ಪಡೆದಿದ್ದಾರೆ. ಇನ್ನು 23 ಟಿ-20 ಪಂದ್ಯಗಳನ್ನು ಆಡಿದ್ದು, 24 ವಿಕೆಟ್ ಪಡೆದುಕೊಂಡಿದ್ದಾರೆ.
ಕ್ರೀಡಾ ಸಚಿವಾಲಯವು 2023ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ನಡೆಯಲಿದ್ದು, ಮೊಹಮ್ಮದ್ ಶಮಿ ಸೇರಿದಂತೆ 26 ಅಥ್ಲೀಟ್ಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
