ಮುಂಬೈ, 2 ನವೆಂಬರ್ (ಹಿ.ಸ):
ಆ್ಯಂಕರ್ :ಐಸಿಸಿ ಏಕದಿನ ವಿಶ್ವಕಪ್ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ 33ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಕುಸಲ್ ಮೆಂಡಿಸ್ ನೇತೃತ್ವದ ಶ್ರೀಲಂಕಾ ಮುಖಾಮುಖಿ ಆಗಲಿದೆ. ಈ ಬಾರಿಯ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳ ಪೈಕಿ ಎಲ್ಲ ಆರು ಮ್ಯಾಚ್ಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಏಳನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇಂದಿನ ಮ್ಯಾಚ್ ಗೆದ್ದರೆ ಅಧಿಕೃತವಾಗಿ ಸೆಮಿ ಫೈನಲ್ಗೆ ಏರಲಿದೆ. ಇತ್ತ ಶ್ರೀಲಂಕಾ ಬಹುತೇಕ ಟೂರ್ನಿಯಿಂದ ಹೊರಬಿದ್ದಾಗಿದೆ.
ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ನಾಯಕ ರೋಹಿತ್ ಶರ್ಮಾ ಹಾಟ್ ಫಾರ್ಮ್ನಲ್ಲಿ ಇದ್ದಾರೆ ಬಿಟ್ಟರೆ ಶುಭ್ಮನ್ ಗಿಲ್ ಕಡೆಯಿಂದ ನಿರೀಕ್ಷೆಗೆ ತಕ್ಕಂತ ಆಟ ಬರುತ್ತಿಲ್ಲ. ಗಿಲ್ ಜಾಗದಲ್ಲಿ ಇಶಾನ್ ಕಿಶನ್ ಆಡಿಸುವ ಸಾಧ್ಯತೆ ಕೂಡ ಇದೆ. ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದ್ದರು. ಇಂದು ದೊಡ್ಡ ಇನ್ನಿಂಗ್ಸ್ನ ನಿರೀಕ್ಷೆ ಇದೆ. ಶ್ರೇಯಸ್ ಅಯ್ಯರ್ ಈ ಬಾರಿಯ ಟೂರ್ನಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಸೂರ್ಯಕುಮಾರ್ ಹಾಗೂ ಕೆಎಲ್ ರಾಹುಲ್ ಲಯದಲ್ಲಿದ್ದಾರೆ. ಭಾರತದ ಬೌಲಿಂಗ್ನಲ್ಲಿ ಯಾವುದೇ ಬದಲಾವಣೆ ತರಲಾರರು. ಯಾಕೆಂದರೆ ಎಲ್ಲ ಬೌಲರ್ಗಳು ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
