ಹೈದರಾಬಾದ್, 9 ಜನವರಿ(ಹಿ.ಸ):
ಆ್ಯಂಕರ್ :
ತೆಲುಗಿನ ‘ಹನುಮಾನ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ತೇಜ್ ಸಜ್ಜಾ ಅವರು ನಟಿಸುತ್ತಿದ್ದು, ಪ್ರಶಾಂತ್ ವರ್ಮ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಪೌರಾಣಿಕ ಹಾಗೂ ಆಧುನಿಕ ಕಥೆಗಳ ಸಮ್ಮಿಶ್ರಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈಗ ಸಿನಿಮಾ ತಂಡ ಒಂದೊಳ್ಳೆಯ ಕೆಲಸ ಮಾಡಲು ಮುಂದಾಗಿದೆ. ಮಾರಾಟ ಆಗುವ ‘ಹನುಮಾನ್’ ಚಿತ್ರದ ಪ್ರತಿ ಟಿಕೆಟ್ಗೆ ಐದು ರೂಪಾಯಿಯನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ತಂಡ ಮುಂದಾಗಿದೆ.
ಕಳೆದ ವರ್ಷ ರಾಮಾಯಣ ಆಧರಿಸಿ ರಿಲೀಸ್ ಆದ ‘ಆದಿಪುರುಷ್’ ಸಿನಿಮಾ ಫ್ಲಾಪ್ ಆಯಿತು. ಪೌರಾಣಿಕ ಕಥೆ ಆಧರಿಸಿ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು ಎಂಬುದನ್ನು ಈ ಸಿನಿಮಾ ಸಾಬೀತು ಮಾಡಿತ್ತು. ಈಗ ‘ಹನುಮಾನ್’ ತಂಡದವರು ಹೊಸ ಪ್ರಯೋಗ ಮಾಡಿದ್ದಾರೆ. ಹನುಮಂತನ ಪಾತ್ರವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಕಥೆಗೆ ಆಧುನಿಕ ಟಚ್ ನೀಡಿ ‘ಹನುಮಾನ್’ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ.
ಜನವರಿ 7ರಂದು ಅದ್ದೂರಿಯಾಗಿ ‘ಹನುಮಾನ್’ ಸಿನಿಮಾದ ಪ್ರೀರಿಲೀಸ್ ಇವೆಂಟ್ ನಡೆಯಿತು. ಚಿರಂಜೀವಿ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಅವರು ಜನರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಮುಖ ವಿಚಾರ ಬಿಚ್ಚಿಟ್ಟರು. ‘ತಮ್ಮ ಚಿತ್ರದ ಪ್ರತಿ ಟಿಕೆಟ್ನಿಂದ 5 ರೂಪಾಯಿಯನ್ನು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಹನುಮಾನ್ ತಂಡ ನಿರ್ಧರಿಸಿದ್ದಾರೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು ಅವರು.
ಹಿಂದೂಸ್ತಾನ್ ಸಮಾಚಾರ್
