ಬೆಂಗಳೂರು, 25 ಫೆಬ್ರವರಿ :
ಆ್ಯಂಕರ್ :
ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿ ಆರಂಭವಾಗಿದ್ದು, ಮೊದಲ ಎರಡು ಪಂದ್ಯ ಕೂಡ ರೋಚಕವಾಗಿತ್ತು. ಡೆಲ್ಲಿ ಮತ್ತು ಮುಂಬೈ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮುಂಬೈ 4 ವಿಕೆಟ್ಗಳ ಜಯ ಸಾಧಿಸಿದರೆ, ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ 2 ರನ್ಗಳ ರೋಚಕ ಗೆಲುವು ಕಂಡಿತು. ಹೀಗೆ ನಡೆದ ಎರಡು ಪಂದ್ಯಕೂಡ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಇದೀಗ ಮತ್ತೊಂದು ಮಹತ್ವದ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಇಂದು ಡಬ್ಲ್ಯೂಪಿಎಲ್ ನಲ್ಲಿ ಬೆತ್ ಮೂನಿ ನಾಯಕತ್ವದ ಗುಜರಾತ್ ಜೈಂಟ್ಸ್ ಮತ್ತು ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗಲಿದೆ.
ಎರಡು ಪಂದ್ಯಗಳ ನಂತರ, ಗುಜರಾತ್ ಜೈಂಟ್ಸ್ ತಮ್ಮ ಆರಂಭಿಕ ಪಂದ್ಯವನ್ನು ಆಡಲು ಸಜ್ಜಾಗಿದೆ. ಗುಜರಾತ್ಗೆ ಮೊದಲ ಸೀಸನ್ ಉತ್ತಮವಾಗಿರಲಿಲ್ಲ. ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸಿದ್ದರು. ಆದರೆ, ಈ ಬಾರಿ ತಂಡ ಬಲಿಷ್ಠವಾಗಿದೆ.
