
ದೆಹಲಿ, 28 ಜನವರಿ :
ಆ್ಯಂಕರ್ :
ನಿನ್ನೆ ನಡೆದ ಆಸ್ಟ್ರೇಲಿಯಾ ಒಪನ್ ಗ್ರ್ಯಾನ್ಸ್ಲಾಮ್ ಟೆನ್ನಿಸ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೋಡಿ ಜಯಗಳಿಸಿದೆ. ಈ ಮೂಲಕ 43 ವರ್ಷದ ರೋಹನ್ ಬೋಪಣ್ಣ , ಪುರುಷರ ಟಿನಿಸ್ ವಿಭಾಗದಲ್ಲಿ ಗ್ರ್ಯಾನ್ಸ್ಲಾಮ್ ಗೆದ್ದ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಬೋಪಣ್ಣ ಜೋಡಿಯು, ಇಟಲಿಯ ಸಿಮೊನ್ನೆ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ ಅವರನ್ನು 7-6 ಮತ್ತು 7-5 ರಿಂದ ಸೋಲಿಸಿತು. ಈ ಹಿಂದೆ ದಿಗ್ಗರಾದ ಲಿಯಾಂಡರ್ ಫೇಸ್ ಹಾಗೂ ಮಹೇಶ್ ಭೂಪತಿ ಭಾರತದ ಪರ ಗ್ರ್ಯಾನ್ಸ್ಲಾಮ್ ಕಿರೀಟ ಜಯಗಳಿಸಿದ್ದರು. ಇದೀಗ ರೋಹನ್ ಬೋಪಣ್ಣ ಗ್ರ್ಯಾನ್ಸ್ಲಾಮ್ ಗೆದ್ದ 3ನೇ ಭಾರತೀಯರಾಗಿ ಹೊರಹೊಮ್ಮಿದ್ದಾರೆ.
