ರಾಂಚಿ, 19 ಫೆಬ್ರವರಿ : ಆ್ಯಂಕರ್:
ರಾಜ್ ಕೋಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ನಾಲ್ಕನೇ ದಿನದಲ್ಲೇ ಗೆದ್ದುಕೊಂಡಿದೆ. ಪಂದ್ಯ ಗೆಲ್ಲಲು ಟೀಮ್ ಇಂಡಿಯಾ ಇಂಗ್ಲೆಂಡ್ಗೆ 557 ರನ್ಗಳ ಕಠಿಣ ಗುರಿ ನೀಡಿತ್ತು. ಆದರೆ, ಭಾರತದ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಇಂಗ್ಲೆಂಡ್ 122 ರನ್ಗಳಿಗೆ ಆಲೌಟ್ ಆಯಿತು. ರೋಹಿತ್ ಪಡೆ 434 ರನ್ಗಳ ದಾಖಲೆಯ ಜಯ ಸಾಧಿಸಿತು. ಬ್ಯಾಟಿಂಗ್ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಸರ್ಫರಾಜ್ ಖಾನ್ ಸಂಚಲನ ಮೂಡಿಸಿದರೆ, ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ತಮ್ಮ ಕೆಲಸ ಪೂರೈಸಿದರು. ಇದರೊಂದಿಗೆ ಭಾರತ ತಂಡ ಈ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಹಾಗಾದರೆ, ಇಂಡೋ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ಯಾವಾಗ?.
ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ಯಾವಾಗ?
ಫೆಬ್ರವರಿ 23 ರಿಂದ ಫೆಬ್ರವರಿ 27ರ ವರೆಗೆ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದೆ.
ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ಎಲ್ಲಿ ಆಡಲಾಗುತ್ತದೆ?
ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
