ದುಬೈ, 19 ಡಿಸೆಂಬರ್(ಹಿ.ಸ):
ಆ್ಯಂಕರ್ :
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮಿನಿ ಹರಾಜು ಪ್ರಕ್ರಿಯೆ ಮಂಗಳವಾರ (ಇಂದು) ದುಬೈನಲ್ಲಿ ನಡೆಯಲಿದೆ.
ದುಬೈನ ಕೋಕಾ ಕೋಲಾ ಅರೆನಾದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1:00 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಮಿನಿ ಹರಾಜಿಗೆ ಒಟ್ಟು 333 ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಈ ಪೈಕಿ 214 ಭಾರತೀಯ ಆಟಗಾರರು ಹಾಗೂ 119 ವಿದೇಶಿ ಆಟಗಾರರು ಇದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಂಡವನ್ನು ಮತ್ತಷ್ಟು ಬಲಪಡಿಸಲು ಎದುರುನೋಡುತ್ತಿದ್ದು, ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ. ಅದರಲ್ಲೂ ಆಸೀಸ್ ಆಟಗಾರರಾದ ಮಿಚೆಲ್ ಸ್ಟಾರ್ಕ್ (Mitchell Starc), ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಕಿವೀಸ್ನ ರಚಿನ್ ರವೀಂದ್ರ (Rachin Ravindra), ಡೇರಿಲ್ ಮಿಚೆಲ್ ಹಾಗೂ ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೋಟ್ಜಿ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ಹಿಂದೂಸ್ತಾನ್ ಸಮಾಚಾರ್
