
ಮುಂಬೈ, 9 ಡಿಸೆಂಬರ್(ಹಿ.ಸ):
ಆ್ಯಂಕರ್ :ಮೊದಲ ಸೀಸನ್ನ ಯಶಸ್ಸಿನ ನಂತರ ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಸೀಸನ್ ಬಗ್ಗೆ ಕುತೂಹಲ ಹೆಚ್ಚಿದೆ. ಲೀಗ್ನ ಎರಡನೇ ಋತು ಫೆಬ್ರವರಿ-ಮಾರ್ಚ್ನಲ್ಲಿ ಆಯೋಜಿಸುವ ನಿರೀಕ್ಷೆಯಿದೆ. ಪಂದ್ಯಾವಳಿಗೆ ಇನ್ನೂ ಸಾಕಷ್ಟು ಸಮಯ ಉಳಿದಿದೆ, ಆದರೆ ಅದಕ್ಕೂ ಮೊದಲು ಇಂದು ಡಿಸೆಂಬರ್ 9 ರ ಶನಿವಾರದಂದು ಹರಾಜು ಆಯೋಜಿಸಲಾಗುತ್ತಿದೆ. 5 ತಂಡಗಳಿರುವ ಈ ಟೂರ್ನಿಯ ಎರಡನೇ ಹರಾಜು ಇದಾಗಿದೆ.
ಹರಾಜು ಎಲ್ಲಿ ನಡೆಯಲಿದೆ?
ಕಳೆದ ಸೀಸನ್ನಂತೆ ಈ ಬಾರಿ ಕೂಡ ಡಬ್ಲ್ಯುಪಿಎಲ್ 2024 ಹರಾಜು ಮುಂಬೈನಲ್ಲಿ ನಡೆಯಲಿದೆ. ಈ ಬಾರಿಯೂ ಕೇವಲ ಒಂದು ದಿನದ ಕಾರ್ಯಕ್ರಮವಾಗಿದ್ದು, ಮಧ್ಯಾಹ್ನ 2ರಿಂದ ಆರಂಭವಾಗಲಿದೆ. ಐದು ಫ್ರಾಂಚೈಸಿಗಳಾದ – ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ದೊಡ್ಡ ಆಟಗಾರರನ್ನು ಪಡೆಯುವತ್ತ ಚಿತ್ತ ನೆಟ್ಟಿದೆ.
ಹಿಂದೂಸ್ತಾನ್ ಸಮಾಚಾರ್
