ವಿಜಯಪುರ, 19 ಆಗಸ್ಟ್ (ಹಿ.ಸ.) :
ಆ್ಯಂಕರ್ : ಶ್ರಾವಣ ಮಾಸ ಅಂಗವಾಗಿ ಭಕ್ತರು ಐತಿಹಾಸಿಕ ಹಳೇ ಮಹಾಕೂಟೇಶ್ವರ, ಹೊಸ ಮಹಾಕೂಟೇಶ್ವರ ದೇವಾಲಯ, ಪಟ್ಟದಕಲ್ಲು ಮತ್ತು ಧಾರ್ಮಿಕ ಪುಣ್ಯಕ್ಷೇತ್ರಗಳಾದ ಬನಶಂಕರಿ ಮತ್ತು ಶಿವಯೋಗಮಂದಿರಕ್ಕೆ ಭೇಟಿ ನೀಡಿದರು.
ಮಹಾಕೂಟೇಶ್ವರ ದೇವಾಲಯಗಳ ಪುಷ್ಕರಣಿಯಲ್ಲಿ ಮತ್ತು ಶಿವಯೋಗಮಂದಿರದಲ್ಲಿ ಉತ್ತರ ವಾಹಿನಿಯಾಗಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಗೈದರು.
ಸ್ನಾನದ ನಂತರ ಪುಷ್ಪಮಾಲೆ, ಬಾಳೆಹಣ್ಣು, ತೆಂಗಿನಕಾಯಿ, ಸಿಹಿ ನೈವೇದ್ಯದ ಮೂಲಕ ಸರದಿ ಸಾಲಿನಲ್ಲಿ ನಿಂತು ಶ್ರದ್ಧೆ ಭಕ್ತಿಯಿಂದ ದೇವರ ದರ್ಶನ ಪಡೆದರು.
ಜಿಟಿ ಜಿಟಿ ಮಳೆ ಮತ್ತು ಮೋಡಕವಿದ ವಾತಾವರಣದಿಂದ ಈ ಬಾರಿ ಭಕ್ತರ ಸಂಖ್ಯೆ ವಿರಳವಾಗಿದ್ದು ಕಂಡು ಬಂದಿತು.
ಬಾದಾಮಿಯಿಂದ ಬಸ್ಸಿನ ಸೌಕರ್ಯ ಇಲ್ಲದ ಕಾರಣ ನಾವು ಆಟೋಗೆ ಬಂದೆವು. ಬಸ್ಸಿನ ಸೌಲಭ್ಯ ಬೇಕು ಎಂದು ಹುಬ್ಬಳ್ಳಿಯ ಭಕ್ತ ಬಸವರಾಜ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande
