ಚಂಡೀಗಡ, 19 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಜಲಂಧರ್ ಘಟಕವು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮಾಡ್ಯೂಲ್‌ನ ಇಬ್ಬರು ಭಯೋತ್ಪಾದಕರಾದ ವಿಶ್ವಜೀತ್ ಮತ್ತು ಜಾಕ್ಸನ್ ಅವರನ್ನು ಬಂಧಿಸಿ, ಅವರ ಬಳಿಯಿಂದ ಒಂದು 86 ಪಿ ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಂಡಿದೆ.
ಈ ಕುರಿತು ಡಿಜಿಪಿ ಗೌರವ್ ಯಾದವ್ ಮಾಹಿತಿ ನೀಡಿದ್ದು, ಇವರು ಕೆನಡಾದ ಜೀಶನ್ ಅಖ್ತರ್ ಮತ್ತು ಅಜಯ್ ಗಿಲ್ ಅವರ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ತಿಂಗಳಲ್ಲೇ ಇಬ್ಬರೂ ತಮ್ಮ ಸಹಚರರ ಮೂಲಕ ಎರಡು ಗ್ರೆನೇಡ್‌ಗಳನ್ನು ಖರೀದಿಸಿದ್ದು, ಅದರಲ್ಲಿ ಒಂದನ್ನು ಎಸ್‌ಬಿಎಸ್ ನಗರದ ಮದ್ಯದ ಅಂಗಡಿ ಸ್ಫೋಟದಲ್ಲಿ ಬಳಸಲಾಗಿತ್ತು.
ಪ್ರಕರಣದ ತನಿಖೆ ಮುಂದುವರೆದಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
