
ಚಿತ್ರದುರ್ಗ, 31 ಡಿಸೆಂಬರ್(ಹಿ.ಸ):
ಆ್ಯಂಕರ್ :
ಚಿತ್ರದುರ್ಗ ಹೊರವಲಯ ಜೈಲು ರಸ್ತೆಯಲ್ಲಿನಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರಗಳಿದ್ದ ಸಂಗತಿ 2 ತಿಂಗಳ ಹಿಂದೆಯೇ ಒಂದಷ್ಟು ಹುಡುಗರ ಗಮನಕ್ಕೆ ಬಂದಿತ್ತೆಂಬ ಕುತೂಹಲಕರ ವಿದ್ಯಮಾನ ಶನಿವಾರ ಬಯಲಾಗಿದೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಮೃತಪಟ್ಟವರ ಅಸ್ಥಿಪಂಜರ ಇದಾಗಿದ್ದು, ಬಡಾವಣೆ ಠಾಣೆ ಪೊಲೀಸರು ಗಮನಿಸಿ ಅಸ್ಥಿಪಂಜರಗಳನ್ನು ಮರಣೋತ್ತರ ಪರೀಕ್ಷೆಗೆ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಗೆ ಕಳುಸಿದ್ದರು.
ಏತನ್ಮಧ್ಯೆ ಮನೆಯಲ್ಲಿ ಅಸ್ಥಿಪಂಜರಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆಟ ವಾಡುವ ಮಕ್ಕಳು ಅಸ್ಥಿಪಂಜರಗಳನ್ನು ಎಣಿಸುತ್ತ ಕೊಠಡಿ ಹಾಗೂ ಹಾಲ್ನಲ್ಲಿ ಅಡ್ಡಾಡುವ ದೃಶ್ಯಗಳ ವಿಡಿಯೋ ಅದಾಗಿದ್ದು, ಟ್ಯೂನ್ವೊಂದನ್ನು ಸೇರಿಸಿ ಹರಿಬಿಡಲಾಗಿದೆ. 2 ತಿಂಗಳಿಗೂ ಮೊದಲೇ ಈ ವಿಡಿಯೋ ಮಾಡಲಾಗಿದೆ ಎನ್ನಲಾಗಿದೆ. ಕೆಂಪು ಟೀ ಶರ್ಟ್ ಹಾಕಿರುವ ಬಾಲಕನೊಬ್ಬ ಮಾತ್ರ ವಿಡಿಯೋದಲ್ಲಿ ಕಾಣಿಸುತ್ತಿದ್ದಾನೆ.
ಈ ಹುಡುಗರು ಯಾರು?: ಅವರು ಹೇಗೆ ಮನೆಯೊಳಗೆ
ಪ್ರವೇಶ ಮಾಡಿದರು? ಎಂಬ ಪ್ರಶ್ನೆಗಳು ಇದೀಗ ಸುಳಿ ದಾಡಿವೆ. ವಿಡಿಯೋ ಸಾಮಾಜಿಕ ಜಾಲತಾಣಗಳಿಗೆ ಎಲ್ಲಿಂದ ಅಪ್ ಲೋಡ್ ಆಯ್ತು ಎಂಬ ಬಗ್ಗೆ ಸೈಬರ್ ಕ್ರೈಂ ಪೋಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಹಿಂದೂಸ್ತಾನ್ ಸಮಾಚಾರ್
