
ತೇಜ್ ಪುರ್, 31 ಡಿಸೆಂಬರ್(ಹಿ.ಸ):
ಆ್ಯಂಕರ್ :
ಅಸ್ಸಾಂನ ತೇಜ್ ಪುರ್ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭ ಇಂದು ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿದ್ದಾರೆ. ಈ ಸಂದರ್ಭದಲ್ಲಿ ಸಚಿವರು, ೪೬ ಸಾಧಕರಿಗೆ ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ. ತೇಜ್ಪುರ್ ವಿಶ್ವವಿದ್ಯಾಲಯವು, ಸೇನಾಪಡೆಯ ಸಿಬ್ಬಂದಿಗೆ ಚೈನೀಸ್ ಭಾಷೆಯಲ್ಲಿ ತರಬೇತಿ ನೀಡಲು ಭಾರತೀಯ ಸೇನೆಯೊಂದಿಗೆ ಕಳೆದ ಏಪ್ರಿಲ್ನಲ್ಲಿ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
