ಮುಂಬೈ, 31 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮುಂಬೈ ಮಹಾನಗರದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ಅಹಿತಕ ಘಟನೆ ತಡೆಗಟ್ಟಲು ಸುಮಾರು ೧೧ ಸಾವಿರದ ೫೦೦ ಪೊಲೀಸ್ರನ್ನು ನಿಯೋಜಿಸಲು ಮುಂಬೈ ಪೊಲೀಸ್ ಆಡಳಿತ ನಿರ್ಧರಿಸಿದೆ. ಸಾರ್ವಜನಿಕ ಉದ್ಯಾನ, ರೆಸ್ಟೋರೆಂಟ್ ವಾಣಿಜ್ಯ ಮಳಿಗೆ ಸಂಕಿರ್ಣಗಳಲ್ಲಿ ಹೊಸ ವರ್ಷಾಚರಣೆ ಮುನ್ನಾದಿನವಾದ ಇಂದು ಸಂಜೆಯಿಂದಲೇ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ೨೨ ಡಿಪ್ಯೂಟಿ ಕಮಿಷನರ್, ೪೫ ಅಸಿಸ್ಟೆಂಟ್ ಕಮಿಷನರ್ ಹಾಗೂ ೨ ಸಾವಿರದ ೫೧ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ಕಾನೂನು ಹಾಗೂ ಸುವ್ಯವಸ್ಥೆ ಪಾಲನೆಗಾಗಿ ನಿಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್
