ಬೆಂಗಳೂರು, 9 ಜನವರಿ(ಹಿ.ಸ):
ಆ್ಯಂಕರ್ :ಕನ್ನಡ ನಾಮಫಲಕ ಹೋರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಮತ್ತೆ ಅರೆಸ್ಟ್ ಆಗಿದ್ದಾರೆ.
ಶನಿವಾರ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ನಾರಾಯಣ ಗೌಡ ಬಿಡುಗಡೆಯಾಗಿದ್ದರು. ಬಿಡುಗಡೆ ಆಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ನಾರಾಯಣ ಗೌಡರನ್ನು ಜೈಲಿನ ಮೊದಲ ಗೇಟ್ನಲ್ಲೇ ವಶಕ್ಕೆ ಪಡೆದಿದ್ದಾರೆ.
2017ರ ಸಾರ್ವಜನಿಕ ಆಸ್ತಿನಾಶ, ಅಧಿಕಾರಿಗಳಿಗೆ ಅಡ್ಡಿ ಪ್ರಕರಣದಲ್ಲಿ ಮತ್ತೆ ನಾರಾಯಣ ಗೌಡರನ್ನು ಬಂಧಿಸಲಾಗಿದೆ. ಪೊಲೀಸರು ನಾರಾಯಣಗೌಡರನ್ನು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಕೋರ್ಟ್ ಆದೇಶದ ಮೇಲೆ ನಾರಾಯಣ ಗೌಡ ಇಂದೇ ಬಿಡುಗಡೆಯಾಗುತ್ತಾರೋ ಇಲ್ಲವೋ ಎನ್ನುವುದು ನಿರ್ಧಾರವಾಗಲಿದೆ.
ಪರಪ್ಪನ ಅಗ್ರಹಾರದ ಬಳಿ 40ಕ್ಕೂ ಹೆಚ್ಚು ಸಿಬ್ಬಂದಿ ಮತ್ತು 4 ಕೆಎಸ್ಆರ್ಪಿ ಪಡೆಯನ್ನು ನಿಯೋಜನೆ ಮಾಡುವ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಶನಿವಾರ ನಾರಾಯಣಗೌಡ ಸೇರಿ 28 ಮಂದಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಹಿಂದೂಸ್ತಾನ್ ಸಮಾಚಾರ್
