ವಿಜಯಪುರ, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮೀನುಗಾರಿಕೆ ಇಲಾಖೆಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ವಲಯ ಹಾಗೂ ರಾಜ್ಯ ವಲಯ ಯೋಜನೆಯಡಿ ಸೌಲಭ್ಯ ಪಡೆಯಲು ವೃತ್ತಿಪರ ಮೀನುಗಾರರು, ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ವಲಯ ಯೋಜನೆಯಡಿ ಜಲಾಶಯ, ನದಿ, ಕೆರೆಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಖರೀದಿಗೆ ಶೇಕಡಾ 50 ರಷ್ಟು ಸಹಾಯಧನ ಹಾಗೂ ಭಾವಿ ಮತ್ತು ಹೊಂಡಗಳು ಹೊಂದಿದ ಕೃಷಿಕರರಿಗೆ ಉಚಿತವಾಗಿ 500 ಮೀನುಮರಿಗಳು ಸರಬರಾಜು, ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತ ಮೀನು ಸಲಕರಣೆಕಿಟ್ಟು ವಿತರಣೆ, ಮೀನುಕೃಷಿಕೊಳ ನಿರ್ಮಾಣಕ್ಕೆ ಮತ್ತು ಹೂಡಿಕೆ ವೆಚ್ಚಗಳಿಗೆ ಸಹಾಯಧನ, ಮೀನು ಮಾರುಕಟ್ಟೆ ಹಾಗೂ ಮಧ್ಯ ವಾಹಿನಿಗೆ ಸಹಾಯಧನ ಯೋಜನೆಯಡಿ, ಹೊಸದಾಗಿ ದ್ವಿ-ಚಕ್ರ ವಾಹನ, ತ್ರಿ ಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಗೆಗೆ ಸಹಾಯಧನ ಯೋಜನೆಗಳಿಗಾಗಿ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯ ವಲಯ ಯೋಜನೆಯಡಿ ಮೀನು ಸಲಕರಣೆ ಕಿಟ್ಟು ಸರಬರಾಜು ಹಾಗೂ ಮೀನುಮರಿ ಖರೀದಿಗೆ ಸಹಾಯಧನ ವಿತರಣೆ ಸೇವಾ ಸಿಂಧು ಮೂಲಕ ಜಲಾಶಯ/ನದಿ ಮೀನುಗಾರಿಕೆ ನಡೆಸಲು ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದ ವೃತ್ತಿಪರ ಮೀನುಗಾರರು, ಮೀನುಕೃಷಿಕರು ಹಾಗೂ ಮೀನುಗಾರಿಕೆ ಸಹಕಾರ ಸಂಘದ ಸದಸ್ಯರು ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಆಯಾ ತಾಲೂಕಿನ ಮೀನುಗಾರಿಕೆ ಇಲಾಖೆಯ ಕಚೇರಿಯಲ್ಲಿ ಸೆಪ್ಟೆಂಬರ್ 05ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಮೀನುಗಾರಿಕೆ ಉಪ ನಿರ್ದೇಶಕರು ವಿಜಯಪುರ ಮೊಬೈಲ್ ಸಂಖ್ಯೆ: 9986132717 ಮತ್ತು ವಿಜಯಪುರ, ಬಬಲೇಶ್ವರ, ತಿಕೋಟಾ, ದೇವರ ಹಿಪ್ಪರಗಿ, ಸಿಂದಗಿ, ಆಲಮೇಲ, ಇಂಡಿ ಹಾಗೂ ಚಡಚಣ ತಾಲೂಕು ವ್ಯಾಪ್ತಿಯ ಮೀನುಕೃಷಿಕರು, ಮೀನುಗಾರರು ವಿಜಯಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಮೊಬೈಲ್ ಸಂಖ್ಯೆ: 9845927110 ಹಾಗೂ ಮುದ್ದೇಬಿಹಾಳ, ತಾಳಿಕೋಟಿ, ನಿಡಗುಂದಿ, ಕೋಲಾರ, ಬ.ಬಾಗೇವಾಡಿ ತಾಲೂಕಿನ ಮೀನು ಕೃಷಿಕರು ಹಾಗೂ ಮೀನುಗಾರರು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಮೊಬೈಲ್ ಸಂಖ್ಯೆ: 9880210505 ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande
