ಚೆನ್ನೈ, 9 ಜನವರಿ(ಹಿ.ಸ):
ಆ್ಯಂಕರ್ :
ತಮಿಳುನಾಡಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸಂಜೆ ಸುರಿದ ಭಾರೀ ಮಳೆಯಿಂದಾಗಿ ತಮಿಳುನಾಡಿನ ಮೈಲಾಡುತುರೈ ಜನವಸತಿ ಪ್ರದೇಶಕ್ಕೆ ಮಳೆ ನೀರು ನುಗ್ಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಸಣ್ಣ-ಪುಟ್ಟ ಗುಡಿಸಲುಗಳಿಗೆಲ್ಲಾ ಮಳೆಯ ನೀರು ನುಗ್ಗಿದ್ದರಿಂದ ಜನರು ಮನೆಯಲ್ಲೂ ಇರಲಾಗದೆ ಮತ್ತು ಮನೆಯಿಂದ ಹೊರ ಬರಲಾರದ ಪರಿಸ್ಥಿತಿ ಉಂಟಾಗಿ ನೀರಿನಲ್ಲೆ ಸಿಲುಕಿ ಒದ್ದಾಡಿದ್ದಾರೆ.
ಇನ್ನು ರಸ್ತೆಗಳಲೆಲ್ಲಾ ನದಿಯಂತೆ ನೀರು ನಿಂತಿದ್ದು, ವಾಹನಗಳು ಹಾಗೂ ಸಾರ್ವಜನಿಕರು ರಸ್ತೆಗೆ ಇಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ತಮಿಳುನಾಡಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿಲಾಗಿದೆ.
ಹಿಂದೂಸ್ತಾನ್ ಸಮಾಚಾರ್
