ಬೆಂಗಳೂರು, 31ಡಿಸೆಂಬರ್(ಹಿ.ಸ):
ಆ್ಯಂಕರ್ :
2024ರ ನ್ಯೂ ಇಯರ್ ಸೆಲೆಬ್ರೇಷನ್ ಪಾರ್ಟಿಗೆ ಕೌಂಟ್ಡೌನ್ ಶುರುವಾಗಿದೆ. ಹೊಸ ವರ್ಷಾಚರಣೆಗೆ ಇಡೀ ಸಿಲಿಕಾನ್ ಸಿಟಿ ತುದಿಗಾಲಲ್ಲಿ ನಿಂತಿದೆ. ಅದರಲ್ಲೂ 2024 ಅದ್ಧೂರಿಯಾಗಿ ವೆಲ್ಕಮ್ ಮಾಡಲು ಜನ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮಧ್ಯೆ ನಮ್ಮ ಮೆಟ್ರೋ ಟಿಕೆಟ್ ದುಬಾರಿ ಮಾಡಿ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಶಾಕ್ ಕೊಟ್ಟಿದೆ.
ಹೌದು, ಹೊಸವರ್ಷದ ಸೆಲೆಬ್ರೆೇಷನ್ ಮುಗಿಸಿ ಪ್ರಯಾಣಿಸುವವರಿಗೆ ರಾತ್ರಿ 2 ಗಂಟೆಯವರೆಗೆ ಮೆಟ್ರೋ ಸೇವೆ ವಿಸ್ತರಣೆ ಮಾಡಿದೆ. ಅದರಲ್ಲೂ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್ ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವೆಡೆ ಸಂಭ್ರಮಾಚರಣೆ ಜೋರಾಗಿರುತ್ತದೆ. ಹೀಗಾಗಿ ಈ ಮಾರ್ಗಗಳಲ್ಲಿ ಮೆಟ್ರೋ, ಸಂಚಾರ ವಿಸ್ತರಿಸಲಾಗಿದೆ. ಅಲ್ಲದೇ ಎಂ.ಜಿ ರಸ್ತೆಯಲ್ಲಿ ಇಂದು ಮೆಟ್ರೋ ಸ್ಟಾಪ್ ಇರುವುದಿಲ್ಲ. ಹೀಗಾಗಿ ಎಂ.ಜಿ.ರಸ್ತೆಯಲ್ಲಿ ಪಾರ್ಟಿ ಮುಗಿಸಿ ಹೋಗುವವರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ಗೆ ಹೋಗಬೇಕಾಗಿದೆ. ಈ ನಿಲ್ದಾಣಗಳಲ್ಲಿ 50 ರೂಪಾಯಿ ಟಿಕೆಟ್ ಪಡೆದು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಜನದಟ್ಟಣೆ ಹಾಗೂ ಚಿಲ್ಲರೆ ಸಮಸ್ಯೆ ನಿಯಂತ್ರಿಸಲು ಟಿಕೆಟ್ ದರ ಏರಿಕೆ ಮಾಡಲಾಗಿದೆ ಎನ್ನಲಾಗ್ತಿದೆ. ನಿತ್ಯ 11 ಗಂಟೆಗೆ ಸ್ಥಗಿತವಾಗ್ತಿದ್ದ ಮೆಟ್ರೋ ಸೇವೆಯನ್ನ ಹೊಸವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ. ನಾಳೆ ಮಾತ್ರ ರಾತ್ರಿ 1.30 ಗಂಟೆವರೆಗೂ ಮೆಟ್ರೋ ಸೌಲಭ್ಯ ಲಭ್ಯವಿದೆ. ಇಷ್ಟೇ ಅಲ್ಲ ಎಂಜಿ ರೋಡ್, ಬ್ರಿಗೇಡ್ ರೋಡ್ಗಳತ್ತ ಮುಖ ಮಾಡೋರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್ಗಳನ್ನ ಓಡಿಸಲು ತೀರ್ಮಾನಿಸಿದೆ. ಅದ್ರಂತೆ ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ಹಿಂದೂಸ್ತಾನ್ ಸಮಾಚಾರ್
