ಬೆಂಗಳೂರು, 17ಜನವರಿ(ಹಿ.ಸ):
ಆ್ಯಂಕರ್ :ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ತರಲು ಉದ್ದೇಶಿಸಿರುವ ಕಾಯ್ದೆ ವಿರುದ್ಧ ಇಂದಿನಿಂದ ಹುಬ್ಬಳ್ಳಿಯಲ್ಲಿ ವಾಹನ ಚಾಲಕರು ಹಾಗೂ ಮಾಲೀಕರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಹೋರಾಟದ ರೂಪುರೇಷೆ ಕುರಿತು ಪೂರ್ವಭಾವಿ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟಕ್ಕೆ ನಿರ್ಧಾರ ಮಾಡಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ 10 ವರ್ಷ ಜೈಲು, ಏಳು ಲಕ್ಷ ದಂಡದ ಕಾನೂನಿಗೆ ವಿರೋಧಿಸಿ ಲಾರಿ ಮುಷ್ಕರ ಹಮ್ಮಿಕೊಳ್ಳುತ್ತಿದ್ದಾರೆ.
ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇ-ಚಲನ್ ಕಾಯ್ದೆ ಲಾರಿ ಮಾಲಕರಿಗೆ ಮಾರಕ ಅಂತ ಆಕ್ರೋಶ ವ್ಯಕ್ತ ಡಿಸಿದ್ದಾರೆ. ಹೈಟ್ ಮತ್ತು ಡೋರ್ ಓಪನ್ಗೆ ಇದ್ದ 500 ರೂಪಾಯಿ ದಂಡ 20 ಸಾವಿರಕ್ಕೆ ಏರಿಕೆ ಖಂಡಿಸಿಯೂ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್
