ಕೋಲಾರ/೨೬ ಜನವರಿ :
ಆ್ಯಂಕರ್ : ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಜೊತೆಗೆ ಸರ್ವ ಧರ್ಮೀಯ ಸಹಿಷ್ಣುತೆಯೇ ಸಂವಿಧಾನದ ಹಿರಿಮೆಯಾಗಿದೆ ಎಂದು ಸಮಾಜ ಸೇವಕ, ಭಾರತ ಸೇವಾದಳ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಅಭಿಪ್ರಾಯಪಟ್ಟರು.
ನಗರದ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ, ಹಳೇ ಮಾಧ್ಯಮಿಕ ಶಾಲೆ, ಹಳೇ ಉರ್ದು ಪ್ರಾಥಮಿಕ, ಮಾಧ್ಯಮಿಕ ಶಾಲೆ, ಸರಕಾರಿ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಘಟಕ ಆಯೋಜಿಸಿದ್ದ ೭೫ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಸಿ, ಪ್ರಗತಿಶೀಲ ರಾಷ್ಟçವಾಗಿರುವ ಹೊರಹೊಮ್ಮುತ್ತಿರುವ ಭಾರತ ವಿಶ್ವದ ಅಗ್ರಗಣ್ಯ ರಾಷ್ಟçವಾಗಲು ಸಂವಿಧಾನ ಸಹಕಾರಿಯಾಗಿದೆಯೆಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಕಾರಿ ಕನ್ನಯ್ಯ ಮಾತನಾಡಿ, ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಮಿತಿಯು ೨ ವರ್ಷ ೧೧ ತಿಂಗಳು ೧೮ ದಿನಗಳ ಕಾಲ ಕೈಬರಹದಲ್ಲಿ ಬರೆದ ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ನವೆಂಬರ್ ೨೬, ೧೯೪೯ ರಂದು ಅಂಗೀಕರಿಸಿ, ೧೯೫೦, ಜ.೨೬ ರಂದು ಅಳವಡಿಸಿಕೊಂಡಿದ್ದರ ನೆನಪಿನಲ್ಲಿ ೭೫ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವುದಾಗಿ ವಿವರಿಸಿದರು.
ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ೭೫ ವರ್ಷಗಳಿಂದಲು ಭಾರತವು ಅಖಂಡವಾಗಿ ಉಳಿಯಲು ಹಾಗೂ ವಿವಿಧ ಭಾಷೆ, ಜಾತಿ, ಧರ್ಮಗಳ ಜನರು ಭಾರತೀಯರಾಗಿ ಐಕ್ಯತೆಯಿಂದ ಮಿಳಿತವಾಗಲು ಸಂವಿಧಾನ ಸಹಕಾರಿಯಾಗಿದ್ದು, ಯುವ ವಿದ್ಯಾರ್ಥಿ ಪೀಳಿಗೆ ಸಂವಿಧಾನದ ಮೂಲ ಆಶಯಗಳನ್ನು ಅರ್ಥ ಮಾಡಿಕೊಂಡು ಭಾರತದ ಐಕ್ಯತೆ, ಸಮಗ್ರತೆ, ಸಮಾನತೆ ಆಶಯಗಳಿಗೆ ಧಕ್ಕೆ ತಾರದಂತೆ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಪದಾಕಾರಿಗಳಾದ ನಾಗರಾಜ್, ಶ್ರೀರಾಮ್, ಕೆ.ಜಯದೇವ್, ಅಪ್ಪಿ ನಾರಾಯಣಸ್ವಾಮಿ, ಫಲ್ಗುಣ, ಗೋಕುಲ ಚಲಪತಿ, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿಯ ಸಿಬ್ಬಂದಿ ಗಿರೀಶ್ಕುಮಾರ್, ಸುಬ್ರಮಣಿ, ಸುದರ್ಶನ್, ಶ್ರೀನಿವಾಸಮೂರ್ತಿ, ಕೆ.ಶ್ರೀನಿವಾಸ್, ಮುನಿರತ್ನಯ್ಯ ಶೆಟ್ಟಿö, ರಾಘವೇಂದ್ರö, ವೆಂಕಟಾಚಲಪತಿ, ಮೂರು ಶಾಲೆಗಳ ಮುಖ್ಯ ಶಿಕ್ಷಕಿಯರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟ ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳಿಗೆ
ಚಿತ : ಕೋಲಾರ ನಗರದ ಭಾರತ ಸೇವಾದಳ ಜಿಲ್ಲಾ ಘಟಕದಿಂದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರ ೭೫ ನೇ ಗಣರಾಜ್ಯೋತ್ಸವವನ್ನು ಧ್ವಜಾರೋಹಣೆ ಮೂಲಕ ನೆರವೇರಿಸಲಾಯಿತು.
