ನವದೆಹಲಿ, 7 ಫೆಬ್ರವರಿ :
ಆ್ಯಂಕರ್ :
ಕರ್ನಾಟಕಕ್ಕೆ ಆಗ್ತಿರುವ ಅನುದಾನ ಅನ್ಯಾಯದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀದಿಗಿಳಿಯಲಿದೆ. ಕೇಂದ್ರದ ತಾರತಮ್ಯ ಖಂಡಿಸಿ ಸಂಸತ್ನ ಕೂಗಳತೆಯಲ್ಲೇ ರಾಜ್ಯ ಸರ್ಕಾರ, ಡಂಗೂರ ಬಾರಿಸಲಿದೆ. ಇಂದು ಪ್ರತಿಭಟನೆಗಾಗಿ ಸಕಲ ಸಿದ್ಧತೆಗಳು ಆಗಿದ್ದು, ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಎಲ್ಲರೂ ದೆಹಲಿಯಲ್ಲಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಅನುದಾನ ತಾರತಮ್ಯ ವಿರುದ್ಧ ಡೆಲ್ಲಿಯ ಜಂತರ್ಮಂಥರ್ನಲ್ಲಿ ಗಟ್ಟಿಧ್ವನಿ ಮೊಳಗಿಸಲಿದೆ. ರಾಜ್ಯ ಸರ್ಕಾರವೊಂದು ಅನುದಾನ ವಿಚಾರದಲ್ಲಿ ಮೊದಲ ಸಲ ಪ್ರತಿಭಟನೆಗೆ ಸಜ್ಜಾಗಿದೆ. ಇಡೀ ಕಾಂಗ್ರೆಸ್ ಸರ್ಕಾರವೇ ಡೆಲ್ಲಿಯಲ್ಲಿ ಬಿಡಾರ ಹೂಡ್ತಿರೋದು ಮೋದಿ ಸರ್ಕಾರಕ್ಕೆ ಮುಜುಗರಕ್ಕೆ ತಳ್ಳಿದೆ.
ನನ್ನ ತೆರಿಗೆ ನನ್ನ ಹಕ್ಕು ಘೋಷ ವಾಕ್ಯದಡಿ ಜಂತರ್ ಮಂತರ್ನಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸರ್ಕಾರದ ಎಲ್ಲ ಸಚಿವರು, ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡಲಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಡೆಲ್ಲಿ ಚಲೋ ಅಭಿಯಾನ ಹಮ್ಮಿಕೊಂಡಿದೆ. ಈ ಮೂಲಕ ಕೇಂದ್ರದಿಂದ ಆಗಿರುವ ತಾರತಮ್ಯ ವಿಚಾರದಲ್ಲಿ ಕನ್ನಡಿಗರಿಗೆ ಆದ ಅನ್ಯಾಯ ಎಲ್ಲವನ್ನು ಜಗಜ್ಜಾಹೀರು ಮಾಡುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. ರಾಜ್ಯದಲ್ಲಿ ಅಷ್ಟೇ ಅಲ್ದೆ ಇದೀಗ ರಾಷ್ಟ್ರ ಮಟ್ಟದಲ್ಲೂ ಕೇಂದ್ರಕ್ಕೆ ಮುಜುಗರ ತರಲು ಕಾಂಗ್ರೆಸ್ ಪ್ಲಾನ್ ಮಾಡಿದೆ.
