ನವದೆಹಲಿ, 7 ಫೆಬ್ರವರಿ :
ಆ್ಯಂಕರ್ :
ಭಾರತ ತಂಡದ ಮುಂದಿನ ಸರಣಿ ವೇಳಾಪಟ್ಟಿ ಪ್ರಕಟವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಟಿ20 ವಿಶ್ವಕಪ್ ಜರುಗಲಿದೆ. ಈ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಝಿಂಬಾಬ್ವೆ ವಿರುದ್ಧ ಸರಣಿ ಆಡಲಿದೆ. ಭಾರತ ತಂಡವು ಜುಲೈನಲ್ಲಿ ಟಿ20 ಸರಣಿಗಾಗಿ ಝಿಂಬಾಬ್ವೆಗೆ ಪ್ರಯಾಣಿಸಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.
ಜುಲೈ 6 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಲಾಗುತ್ತದೆ. ಭಾರತ ಇದುವರೆಗೆ ಝಿಂಬಾಬ್ವೆಯಲ್ಲಿ 3 ಟಿ20 ಸರಣಿಗಳನ್ನು ಆಡಿದೆ. 2010, 2015 ಮತ್ತು 2016 ರ ನಂತರ ಇದೀಗ ಮತ್ತೊಮ್ಮೆ ದ್ವಿಪಕ್ಷೀಯ ಸರಣಿಗಾಗಿ ಭಾರತ ತಂಡವು 4ನೇ ಬಾರಿಗೆ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ.
ಭಾರತ ಮತ್ತು ಝಿಂಬಾಬ್ವೆ ಸರಣಿ ವೇಳಾಪಟ್ಟಿ:
ಜುಲೈ 6: ಮೊದಲ ಟಿ20 ಪಂದ್ಯ
ಜುಲೈ 7: ಎರಡನೇ ಟಿ20 ಪಂದ್ಯ
ಜುಲೈ 10: ಮೂರನೇ ಟಿ20 ಪಂದ್ಯ
ಜುಲೈ 13: ನಾಲ್ಕನೇ ಟಿ20 ಪಂದ್ಯ
ಜುಲೈ 14: ಐದನೇ ಟಿ20 ಪಂದ್ಯ
ಹಿಂದೂಸ್ತಾನ್ ಸಮಾಚಾರ್
