ಬಳ್ಳಾರಿ,
ಆ್ಯಂಕರ್:ನೀತಿ ಸಂಹಿತೆ ಹಾಗೂ ಅಧಿಕಾರಿಗಳು ಚುನಾವಣಾ ಕೆಲಸದಲ್ಲಿ ಬ್ಯುಸಿ ಹಿನ್ನೆಲೆ ಇಂದು ನಿಗದಿಯಾಗಿದ್ದ ಬಳ್ಳಾರಿ ಮೇಯರ್ ಚುನಾವಣೆ ಯನ್ನು ಮುಂದೂಡಿ ಕಲಬುರಗಿ ಪ್ರಾದೇಶಿಕ ಆಯುಕ್ತ ಆದೇಶ ಹೊರಡಿಸಲಾಗಿದೆ.
ಲೋಕಸಭಾ ಚುನಾವಣೆಯ ಬಳಿಕ ನಡೆಸುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಾಲಿ ಮೇಯರ್ ಶ್ವೇತಾ ಅವಧಿ ಅಂತ್ಯ ಹಿನ್ನೆಲೆ ಚುನಾವಣೆ ನಿಗದಿ ಆಗಿತ್ತು. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದೆ.
ಇಂದು ನಡೆಯಬೇಕಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಪಾಲಿಕೆಯ ಗದ್ದುಗೆ ಏರಲು ಆಕಾಂಕ್ಷಿಗಳು ಬರಪೂರ ಉಡುಗೊರೆಗಳನ್ನು ಹಂಚಿದ್ದರು. ಮುಲ್ಲಂಗಿ ನಂದೀಶ್, ಗಾದೆಪ್ಪ, ಪೇರಂ ವಿವೇಕ್ ಮತ್ತು ಪಕ್ಷೇತರ ಸದಸ್ಯ ಪ್ರಭಂಜನ್, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಕಾಂಕ್ಷಿಗಳಾಗಿದ್ದಾರೆ. ಮೂವರು ಪಾಲೆಕೆ ಸದಸ್ಯರ ಮನೆ – ಮನೆಗೆ ಹೋಗಿ ಊಡುಗೊರೆ ಕೊಟ್ಟಿದ್ದಾರೆ.
ಮುಲ್ಲಂಗಿ ನಂದೀಶ್ ಪಾಲಿಕೆ ಸದಸ್ಯರಿಗೆ ಬೆಳ್ಳಿ ತಟ್ಟೆ ಮತ್ತು ಕಾಂಗ್ರೆಸ್ ಚಿಹ್ನೆ ಇರುವ ಬಂಗಾರದ ಚಿಕ್ಕ ಆಭರಣವನ್ನು ಉಡುಗೊರೆಯಾಗಿ ನೀಡಿದ್ದರು. ಪಕ್ಷೇತರ ಸದಸ್ಯ ಪ್ರಭಂಜನ್ ರೇಷ್ಮೆ ಪಂಚೆ, ಸೀರೆ ಮತ್ತು ಇನ್ನಿಬ್ಬರುಡ್ರೈಪ್ರೂಟ್ಸ್ ಬಾಕ್ಸ್ ನೀಡಿ ಸನ್ಮಾನ ಮಾಡಿದ್ದಾರೆ.
