ಆ್ಯಂಕರ್ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ರಾಜ್ಯಾದ್ಯಂತ ಅಗ್ನಿಶಾಮಕ ಠಾಣೆ ಮತ್ತು ಕಚೇರಿಗಳಲ್ಲಿ 2021ನೇ ಸಾಲಿನಿಂದ ಪ್ರತಿ ವರ್ಷ ಫೆಬ್ರವರಿ 23 ರಂದು “ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ತಡೆಗಟ್ಟುವ ದಿನ”ವನ್ನು ಆಚರಿಸಲಾಗುತ್ತದೆ.
ಸದರಿ ದಿನದಂದು ಸಾರ್ವಜನಿಕ ಸ್ಥಳ ಮತ್ತು ಶಾಲಾ- ಕಾಲೇಜು, ಆಸ್ಪತ್ರೆ ಮತ್ತು ಇತರೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಅಣುಕು ಪ್ರದರ್ಶನ ಹಾಗೂ ಉಪನ್ಯಾಸ ನೀಡುವುದರ ಮೂಲಕ ಸಾರ್ವಜನಿಕರಲ್ಲಿ ಅಗ್ನಿಶಮನ ಮತ್ತು ಮುಂಜಾಗ್ರತೆ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ “ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ತಡೆಗಟ್ಟುವ ದಿನ”ವನ್ನು ಆಚರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
