• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಹೈನುಗಾರಿಕೆ ದುರ್ಬಲತೆಯೇ ತಲಾ ಆದಾಯ ಹಿನ್ನಡೆಯ ಪ್ರಮುಖ ಕಾರಣ : ಸಿದ್ದರಾಮಯ್ಯ
Regional

ಹೈನುಗಾರಿಕೆ ದುರ್ಬಲತೆಯೇ ತಲಾ ಆದಾಯ ಹಿನ್ನಡೆಯ ಪ್ರಮುಖ ಕಾರಣ : ಸಿದ್ದರಾಮಯ್ಯ

CliQ INDIA
Last updated: December 19, 2025 4:35 pm
CliQ INDIA
Share
2 Min Read
SHARE
LA bill approval

ಬೆಳಗಾವಿ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೆಳಗಾವಿ ಸುವರ್ಣ ಸೌಧದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೈನುಗಾರಿಕೆ ದುರ್ಬಲವಾಗಿರುವುದೇ ತಲಾ ಆದಾಯ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದರು.

2023–24ರ ತಲಾ ಆದಾಯದ ಜಿಲ್ಲಾವಾರು ಅಂಕಿಅಂಶಗಳನ್ನು ಸದನದ ಮುಂದೆ ಮಂಡಿಸಿದ ಅವರು, ಕಲಬುರಗಿ ಜಿಲ್ಲೆಯ ತಲಾ ಆದಾಯ ರಾಜ್ಯದಲ್ಲೇ ಅತಿ ಕಡಿಮೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ವಿಷಯವಾಗಿ 39 ಸದಸ್ಯರು 17 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದನ್ನು ಸ್ಮರಿಸಿದ ಮುಖ್ಯಮಂತ್ರಿ, ದೀರ್ಘ ಚರ್ಚೆಗೆ ಸರ್ಕಾರ ಸದಾ ತೆರೆದಿದೆ ಎಂದರು.

ಅಭಿವೃದ್ಧಿಗೆ ಅನುದಾನ ಮಾತ್ರ ಸಾಲದು; ಅನುಷ್ಠಾನ, ಬಳಕೆ, ಜನಮನೋಭಾವ ಬದಲಾವಣೆ ಮುಖ್ಯ ಎಂದು ನಂಜುಂಡಪ್ಪ ವರದಿಯ ಆಶಯಗಳನ್ನು ಉಲ್ಲೇಖಿಸಿದರು. ವರದಿಯ ಬಳಿಕ ನೀಡಲಾದ ಅನುದಾನಗಳ ಪರಿಣಾಮಕಾರಿತ್ವ ಕುರಿತು ಅಧ್ಯಯನ–ಸಮೀಕ್ಷೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದರು.

ತಲಾ ಆದಾಯದ ಚಿತ್ರಣ:

ರಾಜ್ಯದ ಸರಾಸರಿ ತಲಾ ಆದಾಯ ₹3.39 ಲಕ್ಷ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 6 ಜಿಲ್ಲೆಗಳು ₹3.4 ಲಕ್ಷಕ್ಕೂ ಮೇಲಿದೆ. 11 ಜಿಲ್ಲೆಗಳು ₹2 ಲಕ್ಷಕ್ಕಿಂತ ಕಡಿಮೆ ತಲಾ ಆದಾಯ ಹೊಂದಿದ್ದು, ಇದರಲ್ಲಿ ಉತ್ತರ ಕರ್ನಾಟಕದ 10 ಜಿಲ್ಲೆಗಳು ಹಾಗೂ ಚಿತ್ರದುರ್ಗ ಸೇರಿವೆ.

ಹೈನುಗಾರಿಕೆ ಅಸಮಾನತೆ:

ಬೆಂಗಳೂರು ಮಿಲ್ಕ್ ಯೂನಿಯನ್ ದಿನಕ್ಕೆ 17.13 ಲಕ್ಷ ಕೆಜಿ ಹಾಲು ಸಂಗ್ರಹಿಸುವಾಗ, ಕಲಬುರಗಿ ಮಿಲ್ಕ್ ಯೂನಿಯನ್ ಕೇವಲ 67 ಸಾವಿರ ಕೆಜಿ ಮಾತ್ರ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ರಾಜ್ಯದ ಜನಸಂಖ್ಯೆಯ ಶೇ.42 ವಾಸಿಸುತ್ತಿದ್ದರೂ, ದಿನದ ಸರಾಸರಿ ಹಾಲು ಸಂಗ್ರಹ 10.45 ಲಕ್ಷ ಲೀಟರ್ ಮಾತ್ರ; ಉಳಿದ ಜಿಲ್ಲೆಗಳು ಸುಮಾರು 1 ಕೋಟಿ ಲೀಟರ್ ಸಂಗ್ರಹಿಸುತ್ತಿವೆ. ಈ ಅಸಮಾನತೆ ನಿವಾರಣೆಗೆ 2025ರ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಹೈನುಗಾರಿಕೆಗೆ ಹೆಚ್ಚುವರಿ ಆದ್ಯತೆ ನೀಡಲಾಗಿದೆ.

ಪ್ರೋತ್ಸಾಹಧನ ಮತ್ತು ಯೋಜನೆಗಳು:

ಹಾಲಿನ ಪ್ರೋತ್ಸಾಹಧನ ಕುರಿತು ಟೀಕೆಗೆ ಉತ್ತರಿಸಿದ ಸಿಎಂ, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ಬಾರಿ ದರ ಹೆಚ್ಚಿಸಿ ಒಟ್ಟು ₹7 ಮಾಡಲಾಗಿದೆ, ಬಿಜೆಪಿ ಅವಧಿಯ ₹630 ಕೋಟಿ ಬಾಕಿ ಪಾವತಿಸಲಾಗಿದೆ ಎಂದರು.

2023–26ರಲ್ಲಿ ₹4,048 ಕೋಟಿ ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ.

ಅನುಗ್ರಹ ಯೋಜನೆ ಪುನರುಜ್ಜೀವನಗೊಳಿಸಿ ಕುರಿ/ಮೇಕೆಗೆ ಪರಿಹಾರವನ್ನು ₹7,500ಕ್ಕೆ, ದೊಡ್ಡ ಜಾನುವಾರುಗಳಿಗೆ ₹15,000ಕ್ಕೆ ಹೆಚ್ಚಿಸಲಾಗಿದೆ. ಅಲೆಮಾರಿ ಕುರಿಗಾರರ ಸಂರಕ್ಷಣೆಗೆ ಕಾಯ್ದೆಯನ್ನೂ ಜಾರಿಗೊಳಿಸಲಾಗಿದೆ.

ಉದ್ಯೋಗ–ಶಿಕ್ಷಣ:

ಉತ್ತರ ಕರ್ನಾಟಕದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಐಟಿಐ, ಪಾಲಿಟೆಕ್ನಿಕ್, ಜಿಟಿಟಿಸಿಗಳ ವಿಸ್ತರಣೆ ನಡೆಯುತ್ತಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಯೇ ಸರ್ಕಾರದ ಆದ್ಯತೆ ಎಂದು ಮುಖ್ಯಮಂತ್ರಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಮೀಸಲಾತಿಗಾಗಿ ಡಿ.13 ರಂದು ಬೆಳಗಾವಿಯಲ್ಲಿ ಪ್ರತಿಭಟನೆ: ಜಯಮೃತ್ಯುಂಜಯ ಸ್ವಾಮೀಜಿ
ಗುರುವಾರದ ರಾಶಿ ಫಲ – Hindusthan Samachar Kannada
ಕುಲಷಿತ ನೀರು ಸೇವಿಸಿ 30ಕ್ಕೂ ಅಧಿಕ ಜನರು ಅಸ್ವಸ್ಥ
ಹೊಸಪೇಟೆ : ವಿದ್ಯುತ್ ವ್ಯತ್ಯಯ | BulletsIn
ವೀರಶೈವ ಮತ್ತು ಲಿಂಗಾಯತ ಒಂದಾಗಬೇಕು – Hindusthan Samachar Kannada

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಗೋವಾ ವಿಮೋಚನಾ ದಿನ ; ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ, ಪ್ರಧಾನಿ ನಮನ
Next Article ದಿಲ್ಲಿಯ ‘ನೋ PUC, ನೋ ಫ್ಯುಯಲ್’ ಅಭಿಯಾನಕ್ಕೆ ವೇಗ: 24 ಗಂಟೆಗಳಲ್ಲಿ 61,000ಕ್ಕೂ ಹೆಚ್ಚು ಪ್ರಮಾಣಪತ್ರಗಳು ಜಾರಿ; ಪರಿಸರ ಸಚಿವರಿಂದ ಅಚ್ಚರಿ ಪೆಟ್ರೋಲ್ ಪಂಪ್ ಪರಿಶೀಲನೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?