ಹುಬ್ಬಳ್ಳಿ, 1 ಜನವರಿ(ಹಿ.ಸ):
ಆ್ಯಂಕರ್ : ಯುವತಿಗೆ ಮತ್ತು ಬರುವ ಔಷಧಿ ಕೊಟ್ಟು ಅತ್ಯಾಚಾರವೆಸಿಗಿದ್ದ ಆರೋಪಿ ಮುಫ್ತಿ (ಮುಸ್ಲಿಂ ಧರ್ಮ ಗುರು) ಗುಲಾಮ ಜಿಲಾನಿ ಅಜಹರಿ ಭಾರತದವನೇ ಅಲ್ಲ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಹೌದು ಮುಫ್ತಿ ಗುಲಾಮ ಜಿಲಾನಿ ಅಜಹರಿ ಮೂಲತಃ ನೇಪಾಳದವನು. ಈತನನ್ನು ಅಲ್ಲಿ ಶೇರ್ ಎ ನೇಪಾಳ ಎಂದು ಕರೆಯಲಾಗುತ್ತಿತ್ತು. ಕಳೆದ ಆರು ವರ್ಷಗಳ ಹಿಂದೆ ಮಧ್ಯಪ್ರದೇಶದ ಖಂಡವಾ ಎಂಬ ಪಟ್ಟಣಕ್ಕೆ ಬಂದು ನೆಲೆಸಿದ್ದಾನೆ. ಮುಫ್ತಿ ಗುಲಾಮ ಜಿಲಾನಿ ಅಜಹರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದಲ್ಲಿ ನೆಲೆಸಿದ್ದಾನೆ. ಖಂಡವಾದಲ್ಲಿ ಮದರಸಾವೊಂದನ್ನು ಪ್ರಾರಂಭಿಸಿದ್ದಾನೆ.
ಮುಫ್ತಿ ಗುಲಾಮ ಜಿಲಾನಿ ಅಜಹರಿ ಈಗಾಗಲೇ ಎರಡು ಮದುವೆಯಾಗಿದ್ದಾನೆ. ಮೊದಲನೇ ಪತ್ನಿ ನೇಪಾಳದವಳು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಬಳಿಕ ಈತ ನೇಪಾಳದಿಂದ ಭಾರತಕ್ಕೆ ಬಂದು ನೆಲೆಸಿದ್ದಾನೆ. ನೇಪಾಳ ಪೌರತ್ವ ಹೊಂದಿರುವ ಈತ, ಖಂಡವಾಗೆ ಬಂದು ನೆಲೆಸಿದ ಬಳಿಕ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡಿದ್ದಾನೆ. ನೇಪಾಳದಲ್ಲಿ ಈತನ ಕುಟುಂಬವಿದ್ದು, ಅಲ್ಲಿಗೆ ಆಗಾಗ ಹೋಗಿ ಬರುತ್ತಿದ್ದನು.
ಗುಲಾಮ ಜಿಲಾನಿ ಅಜಹರಿ ದೇಶದ ವಿವಿಧ ರಾಜ್ಯಗಳಿಗೆ ಹೋಗಿ ಧಾರ್ಮಿಕ ಪ್ರವಚನ ನೀಡಿ ಜನಮನ್ನಣೆ ಗಳಿಸಿದ್ದಾನೆ. ಅಲ್ಲದೆ ಭಾರತದ ಹೆಸರಾಂತ ಧಾರ್ಮಿಕ ಪ್ರವಚನಕಾರರ ವಿರುದ್ಧ ಹೇಳಿಕೆಗಳನ್ನು ಕೊಡುತ್ತಿದ್ದನು ಎಂದು ಹಳೇ ಹುಬ್ಬಳ್ಳಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಸದ್ಯ ಈತನ ಭಾರತೀಯ ಪೌರತ್ವದ ಬಗ್ಗೆಯೂ ತನಿಖೆಯಾಗಬೇಕಾಗಿದೆ.
ಇನ್ನು ನೇಪಾಳದವನಾದ ಗುಲಾಮ ಜಿಲಾನಿ ಅಜಹರಿ ಭಾರತದೊಳಗೆ ನುಸುಳಿ ಇಂತಹ ಕೃತ್ಯ ಮಾಡಿದ್ದನ್ನು ಮೌಲ್ವಿಗಳು ಖಂಡಿಸಿದ್ದಾರೆ.
ಏನಿದು ಪ್ರಕರಣ
ಹುಬ್ಬಳ್ಳಿ ಮೂಲದ 23 ವರ್ಷದ ಯುವತಿ, ಮಧ್ಯಪ್ರದೇಶದ ಖಂಡವಾದಲ್ಲಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿಯ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಗುಲಾಮ ಜಿಲಾನಿ ಅಜಹರಿ ಯುವತಿಯ ತಂದೆಗೆ ಪರಿಚಯಸ್ಥನಾಗಿದ್ದನು. ಹೀಗಾಗಿ ಗುಲಾಮ ಜಿಲಾನಿ ಅಜಹರಿ ಯುವತಿಯ ತಂದೆಗೆ ನಿಮ್ಮ ಮಗಳಿಗೆ ನಮ್ಮ ಮದರಸಾದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಖಂಡವಾ ಪಟ್ಟಣಕ್ಕೆ ಕರೆಸಿಕೊಂಡಿದ್ದನು. ಖಂಡವಾದಲ್ಲಿ ಮುಫ್ತಿ ಯುವತಿಗೆ ಮದರಸಾದಲ್ಲಿ ಕೆಲಸ ಕೊಡಸಿದ್ದನು.
ಬಳಿಕ ಯುವತಿಯನ್ನು ಪುಸಲಾಯಿಸಿದ ಮುಫ್ತಿ ಗುಲಾಮ ಜಿಲಾನಿ ಅಜಹರಿ, ನನ್ನ ಮೊದಲ ಹೆಂಡತಿಗೆ ವಿಚ್ಚೆದನ ನೀಡಿದ್ದೇನೆ. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಲೇ ಯುವತಿಗೆ ಮತ್ತು ಬರುವ ಔಷಧ ಕೊಟ್ಟು ನಿರಂತರವಾಗಿ ಅತ್ಯಾಚಾರವೆಸಗಿದ್ದನು. ಈ ಬಗ್ಗೆ ಸಂತ್ರಸ್ತೆ ಹಳ್ಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
