ಹುಬ್ಬಳ್ಳಿ ಜನವರಿ ೨(ಹಿಸ)
ಆ್ಯಂಕರ್:
ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಳೆ ಪ್ರಕರಣಕ್ಕೆ ಸಂಬಂಧಿಸಿ ವಯಸ್ಕರನನ್ನು ಬಂಧಿಸಿದ ಕಾರಣ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.
ಹಿಂದೂ ವಿರೋಧಿ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಧಿಕ್ಕಾರ ಧಿಕ್ಕಾರ, ಹಿಂದೂ ಕಾರ್ಯಕರ್ತರ ಬಂಧಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಧಿಕ್ಕಾರ ಧಿಕ್ಕಾರ, ಜೈ ಶ್ರೀರಾಮ ಜೈ ಜೈ ಶ್ರೀರಾಮ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಕಾರ್ಯಕರ್ತರ ಬಂಧಿಸಿದ ಶಹರ ಪೊಲೀಸ್ ಠಾಣೆ ಅಧಿಕಾರಿ ಎಂ.ಎಂ. ತಹಶೀಲ್ದಾರ ಅವರು ಠಾಣೆಗೆ ಬಂದು ಯಾಕೆ ಬಂಧಿಸಲಾಗಿದೆ ಎಂಬುವುದು ತಿಳಿಸಬೇಕು ಎಂದು ಪಟ್ಟು ಹಿಡಿದರು. ಶ್ರೀ ರಾಮನ ಭಕ್ತಿ ಗೀತೆ, ಭಜನೆ ಮಾಡುವ ಮೂಲಕ ಧರಣಿ ನಡೆಸಿದರು.
ವಿಶ್ವ ಹಿಂದೂ ಪರಿಷತ್ ಮಹಾನಗರ ಅಧ್ಯಕ್ಷ ಸಂಜಯ ಬಡಸ್ಕರ ಮಾತನಾಡಿ, ಆಯೋಧ್ಯೆ ರಾಮಮಂದಿರ ನಿರ್ಮಾಣ ಸಮಾರಂಭ ನಡೆಯುತ್ತಿರುವುದು ನೋಡಿ ಇಡೀ ದೇಶ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಗರದಲ್ಲಿ ರಾಮಮಂದಿರ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರನ್ನು ಉದ್ದೇಶ ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದೂ ಹೋರಾಟಗಾರನ ಬಂಧನ ಆತ್ಯಂತ ಖಂಡನೀಯವಾಗಿದ್ದು, ಪೊಲೀಸ್ ಇಲಾಖೆ ಹಿಂದೂ ಅಮಾಯಕ ಹಿಂದೂ ಕಾರ್ಯಕರ್ತರ ಬಂಧಿಸಬಾರದು ಎಂದು ಮನವಿ ಮಾಡುತ್ತೇವೆ. ಮನೆ ಮನೆ ಮಂತ್ರಾಕ್ಷತೆ ಹಾಗೂ ಜಾಗೃತಿ ಮೂಡಿಸುತ್ತಿರುವ ಕಾರ್ಯಕರ್ತರ ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಹೇಳಿದರು.
ಹಿಂದೂ ಸಂಘಟನೆ ಮುಖಂಡ ಜಯತೀರ್ಥ ಕಟ್ಟಿ, ೧೯೯೨ ರಲ್ಲಿ ನಡೆದ ಹೋರಾಟ ಪ್ರಕರಣ ಸಂಬಂಧಿಸಿ ಹೋರಾಟಗಾರರನ್ನು ತಲೆ ಮರಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ತೋರಿಸಿದೆ. ಈಗ ಏಕಾಏಕಿ ಒಬ್ಬ ಹೋರಾಟಗಾರರನ್ನು ಬಂಧಿಸಿದ್ದಾರೆ. ಇಷ್ಟು ದಿನ ಅವರು ನಗರದಲ್ಲಿ ಇದ್ದರೂ ಯಾಕೇ ಬಂಧಿಸಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.
ಪೊಲೀಸ್ ಅಧಿಕಾರಿ ಮುಸ್ಲಿಂ ಆಗಿದ್ದರಿಂದ ಉದ್ದೇಶ ಪೂರ್ವಕವಾಗಿ ಬಂಧಿಸಿದ್ದಾರೆ. ಈ ವಿಚಾರದಲ್ಲಿ ಇಲಾಖೆಗೆ ಒಂದು ಕಡೆ ಸರ್ಕಾರದ ಒತ್ತಡವು ಇರಬಹದು. ಆದರೆ ಪೊಲೀಸ್ ಅಧಿಕಾರಿಗಳು ವಿವೇಚನೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಹೆದರಿಸುವ ಉದ್ದೇಶ ಪೊಲೀಸ್ ಇಲಾಖೆಯದಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಒಂದು ಸಮುದಾಯಕ್ಕೆ ಕುಮ್ಮಕ್ಕು ನೀಡುವುದು. ಇನ್ನೂಂದು ಸಮುದಾಯಕ್ಕೆ ತೊಂದರೆ ನೀಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ವಿಶ್ವ ಹಿಂದೂ ಪರಿಷತ್ ಮುಖಂಡರಾದ ರಮೇಶ ಕದಂ, ಸುಬ್ರಹ್ಮಣ್ಯ ಶಿರಕೋಳ, ಮಂಜು ಕಲಾಲ, ರಂಗಾ ಕಟಾರೆ, ರಾಜು ಕುದನಹಳ್ಳಿ, ಶಿವಾನಂದ ಸತ್ತಿಗೇರಿ, ರಾಜು ಜರತಾರಘರ, ಅನುಪ ಬಿಜವಾಡ ಇದ್ದರು.
ಬಾಕ್ಸ್ :
ಹಿರಿಯ ಪೊಲೀಸ್ ಅಧಿಕಾರಿಗಳು ಕ್ಷಮೆಯಾಚಿಸಿದ್ದಾರೆ. ೧೯೯೨ ಪ್ರಕರಣ ಮರಳಿ ಪರಿಶೀಲನೆ ಮಾಡುತ್ತೇವೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರಿಂದ ಹೋರಾಟ ಹಿಂಪಡೆಯಲಾಗುವುದು ವಿಶ್ವ ಹಿಂದೂ ಪರಿಷತ್ ಮಹಾನಗರ ಅಧ್ಯಕ್ಷ ಸಂಜೀವ ಬಡಸ್ಕರ ತಿಳಿಸಿದರು.
ಈ ಕುರಿತು ಪೋಲಿಸ ಇಲಾಖೆ ಪ್ರತಿಕ್ರಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ಪ್ರಕರಣದ ಹಿನ್ನೆಲೆ ಸಂಪೂರ್ಣ ವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಂದೆ ಯಾವತ್ತು ಈ ರೀತಿ ಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಡಿಸಿಪಿ
ರಾಜೀವ ಎಂ. ತಿಳಿಸಿದ್ದಾರೆ.
ಹಿಂದುಸ್ತಾನ್ ಸಮಾಚಾರ.
