ಬೀದರ್, 29 ಡಿಸೆಂಬರ್(ಹಿ.ಸ):
ಆ್ಯಂಕರ್ :
ಗಡಿ ಜಿಲ್ಲೆ ಬೀದರ್ ನಿಂದ ರಾಜ್ಯದ ರಾಜ್ಯಧಾನಿ ಬೆಂಗಳೂರು, ದೆಹಲಿ, ಹೈದ್ರಾಬಾದ್ ಹಾಗೂ ಪುಣೆಗೆ ಇಲ್ಲಿಂದ ವಿಮಾನ ಹಾರಾಟ ಮಾಡಬೇಕು ಬೀದರ್ ನಲ್ಲೊಂದು ವಿಮಾನ ನಿಲ್ದಾಣ ವಾಗಬೇಕು ಎಂದು ಜಿಲ್ಲೆಯ ಜನರು ಕನಸನ್ನ ಕಂಡಿದ್ದರೂ. ಇದಕ್ಕಾಗಿ ಹತ್ತಾರು ಹೋರಾಟಗಳನ್ನ ಸಹ ಮಾಡಿದ್ದರು. ಜನರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ 2020 ಪೆಬ್ರುವರಿ 7 ರಂದು ಬೀದರ್ನಿಂದ ಬೆಂಗಳೂರಿಗೆ 72 ಸೀಟ್ನ ಟ್ರೋಜೆಟ್ ವಿಮಾನದ ಹಾರಾಟ ಆರಂಭಿಸಿತು. ಆದರೆ, ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದಾಗಿ ಟ್ರೂಜೇಟ್ ವಿಮಾನ ಕೆಲವು ತಿಂಗಳಲ್ಲಿಯೇ ತನ್ನ ಹಾರಾಟವನ್ನ ನಿಲ್ಲಿಸಿತು.
ಇದಾದ ಬಳಿಕ ಒಂದು ವರ್ಷಗಳ ಕಾಲ ವಿಮಾನ ಹಾರಾಡಲೇ ಇಲ್ಲ. ಪ್ರಯಾಣಿಕರು ಹೈದ್ರಾಬಾದ್ಗೆ ಹೋಗಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರು ಸೇರಿ ಇತರೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡಿದರು. ಇದು ಪ್ರಯಾಣಿಕರಿಗೆ ಕಷ್ಟವಾಗ ತೊಡಗಿದಾಗ ಪ್ರಯಾಣಿಕರ ಒತ್ತಾಯದ ಮೇರೆಗೆ 2022 ಜೂನ್ 15 ರಂದು ಸ್ಟಾರ್ ಏರ್ ವಿಮಾನವು ತನ್ನ ಹಾರಾಟವನ್ನ ಆರಂಭಿಸಿತು. ಆದರೆ ಒಂದೂವರೆ ವರ್ಷದಲ್ಲಿಯೇ ಇದು ಕೂಡ ಆರ್ಥಿಕ ನಷ್ಟದಿಂದಾಗಿ ತನ್ನ ಸೇವೆಯನ್ನ ನಿಲ್ಲಿಸಿದೆ. ಹೀಗಾಗಿ ಇಲ್ಲಿ ಸುಸ್ಸಜ್ಜಿತ ಏರ್ ಪೋರ್ಟ್ ಇದ್ದರು ಕೂಡ ಜಿಲ್ಲೆಯ ಜನರಿಗೆ ವಿಮಾನ ಸೌಲಭ್ಯ ಸಿಗದಂತಾಗಿದೆ.
ಹಿಂದೂಸ್ತಾನ್ ಸಮಾಚಾರ್
