ವಿವೇಕಾನಂದರ ಚರಿತ್ರೆ ಓದಲು ವಿದ್ಯಾರ್ಥಿಗಳಿಗೆ ಕರೆ
ಕೋಲಾರ/ಕೋಲಾರ ೧೨ (ಹಿ.ಸ) : ವಿವೇಕಾನಂದರ ತತ್ವಗಳನ್ನು ವಿದ್ಯಾರ್ಥಿಗಳು ಅನುಸರಿಸಿದರೆ ಶೈಕ್ಷಣಿಕವಾಗಿ ಅದ್ಭುತ ಯಶಸ್ಸು ಕಾಣಬಹುದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎನ್.ವಿ. ನರೇಂದ್ರಬಾಬು ಸಲಹೆ ನೀಡಿದರು.
ಕೋಲಾರ ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಭಾರತ ಸೇವಾದಳ ಹತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಲ್ಲಿ ಪರಿಪೂರ್ಣತೆಯನ್ನು ಸಿದ್ಧಿಸುವುದೇ ಶಿಕ್ಷಣ ಇದಕ್ಕಾಗಿ ಹೊಸ ಗುರುವನ್ನು ಹುಡುಕುವ ಅಗತ್ಯವಿಲ್ಲ ನಿಮಗೆ ನೀವೇ ಗುರು, ನಿಮ್ಮ ಮನಸ್ಸಿನ ಮಾತು ಕೇಳಿ ಮುಂದುವರೆಯಿರಿ. ಬದುಕಿನಲ್ಲಿ ಸಾಕಷ್ಟು ಸವಾಲುಗಳು ಬರಬಹುದು, ಅಂಜದೆ ನುಗ್ಗಿ ನಡೆಯಿರಿ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಮಾತನಾಡಿ ಸಾಧನೆ ಮಾಡಲು ಬಯಸುವವರು ನಿಮಗೆ ನಿಮ್ಮ ಮೇಲೆ ನಂಬಿಕೆ ಇಡಬೇಕು, ವಿವೇಕಾನಂದರ ವಾಣಿಯಂತೆ ಹೇಳಿ ಎದ್ದೇಳಿ ಗುರುಮುಟ್ಟುವ ತನಕ ವಿರಮಿಸಬೇಡಿ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ವೆಂಕಟ ಮುನಿಯಪ್ಪ ಮಾತನಾಡಿ ವಿಶ್ವಕ್ಕೆ ಭಾರತೀಯ ಮೌಲ್ಯ ಸಾರಿದ ಸಂತ ವಿವೇಕಾನಂದರ ಜೀವನ ಆದರ್ಶಗಳು ಎಲ್ಲರಿಗೂ ಸ್ಪೂರ್ತಿ ಅಭ್ಯಾಸ ನಿರಂತರ ಆಗಬೇಕು ಆಗ ಮಾತ್ರ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎನ್.ಬಿ. ದಾನೇಶ್ ಮಾತನಾಡಿ ಮೊದಲು ದೇಶ ಪ್ರೇಮಿಗಳಾಗಬೇಕು ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನಗೆ ಗೌರವ ನೀಡಬೇಕು ಈ ಮೂಲಕ ಸೇವೆಗಾಗಿ ಬಾಳುವಂತವರಾಗಬೇಕು ಎಂದರು. ಶಾಲಾ ಶಿಕ್ಷಕ ಪಿ.ಎಂ. ಗೋವಿಂದಪ್ಪ, ಎಂ.ಆರ್. ಮೀನಾ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಹರಟಿ ಸರ್ಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು.
