
ಹೊಸಪೇಟೆ, 12 ಜನವರಿ(ಹಿ.ಸ):
ಆ್ಯಂಕರ್: ಹಂಪಿ ಉತ್ಸವ-2024ರ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನಗರಾಭಿವೃದ್ಧಿ ಕೋಶ, ಹೊಸಪೇಟೆ ನಗರಸಭೆ, ಕಮಲಾಪುರ ಪುರಸಭೆ ಹಾಗೂ ಹಂಪಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಜನವರಿ 12ರಂದು ಸ್ವಚ್ಛತಾ ಕಾರ್ಯ ನಡೆಯಿತು.
2023-24ನೇ ಸಾಲಿನ ಹಂಪಿ ಉತ್ಸವವು ಫೆಬ್ರವರಿ 02, 03 ಮತ್ತು 04ರಂದು ಮೂರು ದಿನಗಳ ಕಾಲ ನಡೆಯಲಿದ್ದು, ಉತ್ಸವದ ತಯಾರಿಯ ಭಾಗವಾಗಿ ಸ್ವಚ್ಛತಾ ಮತ್ತು ನೈರ್ಮಲ್ಯ ಸಮಿತಿಯು ಹಂಪಿಯ ಗಾಯಿತ್ರಿ ಪೀಠ, ಮುಖ್ಯ ವೇದಿಕೆ ಸೇರಿದಂತೆ ಹಂಪಿಯ ಪ್ರಮುಖ ಸ್ಥಳಗಳ ಸ್ವಚ್ಛತೆಗೆ ಮುಂದಾಗಿದೆ.
ನಗರಸಭೆ, ಪುರಸಭೆ, ಗ್ರಾ.ಪಂ ಕಸವಿಲೇವಾರಿ ವಾಹನಗಳು, ಜೆಸಿಬಿ ವಾಹನ ಹಾಗೂ ಪೌರಕಾರ್ಮಿಕರು ಈ ಸ್ವಚ್ಛತಾ ಕಾರ್ಯಕ್ಕೆ ಸಾಕ್ಷಿಯಾದರು.
