ವಿಜಯಪುರ, 19 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ವಿವಿಕೆ ಫೌಂಡೇಶನ್ ನಿಂದ ಉಚಿತ ಹೃದಯರೋಗ ತಪಾಸಣೆ ಶಿಬಿರವನ್ನು ಆ. ೨೧ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ವಿವಿಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ವೀಣಾ ಕಾಶಪ್ಪನವರ ತಿಳಿಸಿದರು.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ತಪಾ ಸಣಾ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ನನ್ನ ಹುಟ್ಟುಹಬ್ಬದ ಪ್ರಯುಕ್ತ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಲಿದ್ದು, ಸಾಯಂಕಾಲ ೫ರ ವರೆಗೆ ತಪಾಸಣೆ ನಡೆಯಲಿದೆ. ತಜ್ಞ ವೈದ್ಯರುಗಳಿಂದ ಈ ಶಿಬಿರ ನಡೆಯಲಿದ್ದು, ಬಿಪಿ, ಶುಗರ್, ಇಸಿಜಿ, ಇಕೋ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು.
ಎದೆ ನೋವು, ಆಯಾಸ, ಎದೆ ಚುಚ್ಚುವುದು, ಎದೆ ಬಡಿತ, ಉಸಿರಾಟದ ತೊಂದರೆ, ತಣ್ಣನೆ ಬೆವರು, ಭುಜ ಮತ್ತು ಕೈಗಳ ಸೆಳೆತ, ಹೃದಯರೋಗದ ಲಕ್ಷಣಗಳಾಗಿದ್ದು, ಮಕ್ಕಳಿಂದ ಹಿಡಿದು ವೃದ್ದರವರೆಗೂ ತಪಾಸಣೆಗಳನ್ನು ಮಾಡಲಾಗುವುದು ಎಂದರು.
ಶಿಬಿರದ ಸದುಪಯೋಗವನ್ನು ಪಡೆಸಿ ಕೊಳ್ಳಬೇಕು. ಅಭಿಮಾನಿಗಳ ಬಳಗ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಬೀದಿ ಬದಿ ವ್ಯಾಪಾರಸ್ತರಿಗೆ ಛತ್ರಿಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಮೋ.:89046 24441, 73534 50664, ಮಂಜು-91642 02200 ಇವರನ್ನು ಸಂಪರ್ಕಿಸಬಹುದು.
ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಭೋವಿ, ಚರಂತಿಮಠ ಹಾಗೂ ಇಲಕಲ್ ಶ್ರೀಗಳು ಆಗಮಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande
