

ರಾಯಚೂರು, 31 ಅಕ್ಟೋಬರ್ (ಹಿ.ಸ):
ಆ್ಯಂಕರ್: ಕೇಂದ್ರದ ಗೃಹ ಸಚಿವರು, ಸಹಕಾರ ಸಚಿವರು ಹಾಗೂ ಮಾಜಿ ಉಪ ಪ್ರಧಾನಿ ಮಂತ್ರಿಗಳಾದ ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿವಸವನ್ನು ಅ.31ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಜಲ ನಿರ್ಮಲ ಸಭಾಂಗಣದಲ್ಲಿ ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಶಶಿಕಾಂತ ಶಿವಪುರೆ ರವರು ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು ಭಾರತ ದೇಶದಲ್ಲಿ ಎಲ್ಲಾರು ಒಗ್ಗಟ್ಟಿನ ಮಂತ್ರವನ್ನು ಜಪಿಸಲಾಗುತ್ತಿರುವುದು ಇದು ನಮ್ಮಲ್ಲಿರುವ ಏಕತೆಯನ್ನು ತೋರಿಸುತ್ತದೆ ಎಂದರು. ಭಾರತವು ವಿವಿಧ ಸಂಸ್ಕ್ರತಿ, ಸಂಪ್ರದಾಯ, ಧರ್ಮ, ಭಾμÉಗಳ ಶ್ಲಾಘನೀಯ ಸಂಯೋಜನೆಯನ್ನು ನಾವು ಕಾಣುವ ನೆಲವಾಗಿದೆ ಎಂದರು.
ಈ ವರ್ಷ ದೇಶಾದ್ಯಂತ ಮೇರಿ ಮಾಟಿ ಮೇರಿ ದೇಶ್ (ನನ್ನ ಮಣ್ಣು ನನ್ನ ದೇಶ) ಎಂಬ ವಿಶೇಷ ಅಭಿಯಾನ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಿಂದ ಸಂಗ್ರಹಿಸಿದ ಮಣ್ಣು ದೆಹಲಿಗೆ ಕಳುಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಕ ಪ್ರಕಾಶ,ವಿ. ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
