ಕೂಡ್ಲಿಗಿ,
ಆ್ಯಂಕರ್ : ಕೂಡ್ಲಿಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕಾಗಿದ್ದು, ಇಡೀ ತಾಲ್ಲೂಕಿನ ಜನರು ನೀರಿನ ಸಮಸ್ಯೆಯಿಂದ ನರಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕೂಡ್ಲಿಗಿ ತಾಲೂಕಿನ ಕುಡಿಯುವ ನೀರಿನ ಬವಣೆಯನ್ನು ನೀಗಿಸುತ್ತೇನೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಭರವಸೆ ನೀಡಿದ್ದಾರೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಮತ ಪ್ರಚಾರ ನಡೆಸಿ, ಮಾತನಾಡಿ, ಈ ಕ್ಷೇತ್ರದಲ್ಲಿ ಫೆÇ್ಲೀರೈಡ್ ನೀರಿನ ಸಮಸ್ಯೆ ಇದೆ. ಎಲ್ಲ ಹಳ್ಳಿಗೂ ಶುದ್ಧ ನೀರು ಪೂರೈಕೆ ಮಾಡಿ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುತ್ತೇನೆ. ಬಿಜೆಪಿ ಸರ್ಕಾರ ತಾಲೂಕಿನ 80 ಕೆರೆಗಳಿಗೆ ನೀರುಣಿಸುವ ಯೋಜನೆ ಜಾರಿ ಮಾಡಿದೆ ಎಂದರು.
ಕೂಡ್ಲಿಗಿಗೂ ರೇಲ್ವೆ ಸಂಪರ್ಕ ಬೇಕಿದೆ. ಸಂಸದನಾಗಿ ನಾನು ಈ ಬೇಡಿಕೆಯನ್ನು ಈಡೇರಿಸುತ್ತೇನೆ. ದೇಶಕ್ಕಾಗಿ ನರೇಂದ್ರ ಮೋದಿ ಅವರು ಗೆಲ್ಲಬೇಕು, ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬಿ. ಶ್ರೀರಾಮುಲು ಗೆಲ್ಲಬೇಕು. ಕಾರಣ ತಾವೆಲ್ಲರೂ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ವಿಧಾನಪರಿಷತ ಸದಸ್ಯರಾದ ರವಿಕುಮಾರ್. ವೈ.ಎಂ. ಸತೀಶ್, ಮುಖಂಡರಾದ ಬಂಗಾರು ಹನುಮಂತ, ವಿರೇಂದ್ರ ಪ್ರಾಣೇಶ್ ಸೇರಿ ಅನೇಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
