
ಬೆಂಗಳೂರು, 29 ಡಿಸೆಂಬರ್(ಹಿ.ಸ):
ಆ್ಯಂಕರ್ :ಕೊರೊನಾ ಕಡಿಮೆ ಆಯ್ತು ಅಂದುಕೊಳ್ಳುವಷ್ಟರಲ್ಲಿ ರಾಜ್ಯದಲ್ಲಿ ಜೆಎನ್.1 ಆತಂಕ ಹೆಚ್ಚಾಗಿದೆ. ಇಲಿಯವರೆಗು ಕೊರೊನಾ ಮತ್ತೆ ಬಂತು ಎಂದು ತಿಳಿಯಲಾಗಿತ್ತು. ಆದರೆ ರಾಜ್ಯ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಬೇರೆಯದ್ದೇ ಹೇಳುತ್ತಿದೆ. ಇದು ಆರೋಗ್ಯ ಇಲಾಖೆಗೂ ಟೆನ್ಷನ್ ಹೆಚ್ಚಿಸಿದೆ. ಕರ್ನಾಟಕದಲ್ಲಿ ದಾಖಲಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳಲ್ಲಿ ಶೇ 90 ರಷ್ಟು ಒಮಿಕ್ರಾನ್ ರೂಪಾಂತರಿ ಜೆಎನ್.1 ಅಂಶ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
197 ಸ್ಯಾಂಪಲ್ಸ್ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಕಳುಹಿಸಲಾಗಿದೆ. ಸದ್ಯ ಬಂದಿರುವ 60 ಸ್ಯಾಂಪಲ್ಸ್ಗಳ ವರದಿ ಪ್ರಕಾರ ಶೇ50 ರಷ್ಟು ರೋಗಿಗಳಲ್ಲಿ ಉಪತಳಿ ಜೆಎನ್.1 ರೋಗದ ಅಂಶಗಳು ಕಂಡು ಬಂದಿವೆ. ಹೀಗಾಗಿ ರಾಜ್ಯದಲ್ಲಿ ಸರಾಸರಿ ಶೇ50 ರಷ್ಟು ಪ್ರಕರಣಗಳು ಜೆಎನ್.1 ಇರುವ ಸಾಧ್ಯತೆ ಇದೆ. ಇನ್ನು ಉಳಿದ ಸ್ಯಾಂಪಲ್ಸ್ಗಳಲ್ಲೂ ಕೂಡ ಜೆಎನ್.1 ಅಂಶ ಇರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್
