• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಬದುಕಿನ ಪ್ರತಿ ಕ್ಷಣವನ್ನು ಸದುಪಯೋಗ ಮಾಡಿಕೊಂಡು ಆದರ್ಶರಾಗಿರಿ – ಬಸವಲಿಂಗ ಮಹಾಸ್ವಾಮಿಗಳು
Regional

ಬದುಕಿನ ಪ್ರತಿ ಕ್ಷಣವನ್ನು ಸದುಪಯೋಗ ಮಾಡಿಕೊಂಡು ಆದರ್ಶರಾಗಿರಿ – ಬಸವಲಿಂಗ ಮಹಾಸ್ವಾಮಿಗಳು

CliQ INDIA
Last updated: July 19, 2025 7:00 am
CliQ INDIA
Share
2 Min Read
SHARE
ಬದುಕಿನ ಪ್ರತಿ ಕ್ಷಣವನ್ನು ಸದುಪಯೋಗ ಮಾಡಿಕೊಂಡು ಆದರ್ಶರಾಗಿರಿ - ಬಸವಲಿಂಗ ಮಹಾಸ್ವಾಮಿಗಳು

ಬಳ್ಳಾರಿ, 18 ಜುಲೈ (ಹಿ.ಸ.) :

ಆ್ಯಂಕರ್ : ಬದುಕಿನ ಪ್ರತಿ ಕ್ಷಣವನ್ನೂ ಸದುಪಯೋಗ ಮಾಡಿಕೊಂಡಾಗಲೇ ಆದರ್ಶ ವ್ಯಕ್ತಿತ್ವ ರೂಪುಗೊಂಡು ಜೀವನ ಸಾರ್ಥಕವಾಗುತ್ತದೆ ಎಂದು ಹಂಪಿ ಹೇಮಕೂಟ ಶೂನ್ಯಸಿಂಹಾಸನಾಧೀಶ್ವರ, ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಅವರು ತಿಳಿಸಿದ್ದಾರೆ.

ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ `ಮಾಸಿಕ ಶಿವಾನುಭವ ಸಂಪದ – 06′ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷರು, ಶ್ರೀಮಠದ ಆಪ್ತರಾಗಿದ್ದ ಶ್ರೀ ಎನ್. ತಿಪ್ಪಣ್ಣ ಅವರ ಶ್ರದ್ಧಾಂಜಲಿ’ಯಲ್ಲಿ ಶ್ರೀಗಳು ಆಶೀರ್ವಚನ ಮಾಡಿದರು.

ಪ್ರತಿಯೊಬ್ಬರೂ ಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ಜನಸೇವೆ, ಧರ್ಮಸೇವೆ ಹೀಗೇ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈನಂದಿನ ಚಟುವಟಿಕೆಗಳಲ್ಲಿ ಸಮಯವನ್ನು ಮೀಸಲು ಮಾಡಿ, ಆದರ್ಶ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಫ.ಗು. ಹಳಕಟ್ಟಿ ಅವರು ಶಿಕ್ಷಣ, ರಾಜಕೀಯ, ಜನಸೇವೆ, ಕಾನೂನು ಶಾಸ್ತ್ರದ ಸೇವೆಯ ಜೊತೆಯಲ್ಲಿಯೇ ವಚನ ಸಾಹಿತ್ಯಕ್ಕಾಗಿ ತಮ್ಮ ಬದುಕನ್ನು ತ್ಯಾಗ ಮಾಡಿ, 16 ಸಾವಿರ ವಚನಗಳನ್ನು ಸಂಗ್ರಹ ಮಾಡಿ ಮನೆ ಮನೆ ತಲುಪಿಸಿ ಪ್ರಾತಃಸ್ಮರಣೀಯರಾಗಿ ಅಜರಾಮರರಾಗಿದ್ದಾರೆ. ಬದುಕನ್ನು ವಚನ ಸಾಹಿತ್ಯಕ್ಕಾಗಿ ಮೀಸಲು ಮಾಡಿ ಕಾಯಕಯೋಗಿ ನಮ್ಮಲ್ಲಿ ಶಾಶ್ವತವಾಗಿದ್ದಾರೆ. ಎನ್. ತಿಪ್ಪಣ್ಣ ಅವರೂ ಜೀವಮಾನವಿಡೀ ಶಿಕ್ಷಣ, ಸಮಾಜಕ್ಷೇತ್ರ, ನ್ಯಾಯಶಾಸ್ತ್ರಕ್ಕೆ ದುಡಿದು ನಮ್ಮೆಲ್ಲರಲ್ಲೂ ಅಮರರಾಗಿದ್ದಾರೆ ಎಂದರು.

ಕನ್ನಡ ಉಪನ್ಯಾಸಕ ಬಸವರಾಜ ಅಮಾತಿ ಅವರು, ವಚನ ಸಾಹಿತ್ಯದ ಪಿತಾಮಹ ಫ.ಗು. ಹಳಕಟ್ಟಿ ಅವರ `ಜೀವನದರ್ಶನ’ವನ್ನು ಮಾಡಿ, ಹಳಕಟ್ಟಿ ಅವರು ವಚನ ಸಾಹಿತ್ಯದ ಅವಿಭಾಜ್ಯ ಎಂದರು.

ಮುಖ್ಯ ಅತಿಥಿಗಳಾದ ಪತ್ರಕರ್ತ ಎನ್. ವೀರಭದ್ರಗೌಡ ಅವರು, ಆಧುನಿಕತೆ ಮತ್ತು ದುಡಿಮೆಯ ಒತ್ತಡದಲ್ಲಿ ದೇವರು, ಸಂಸ್ಕøತಿ, ಸಂಸ್ಕಾರಗಳನ್ನು ಮರೆಯುತ್ತಿರುವ ಸಂದರ್ಭದಲ್ಲಿ `ಶಿವಾನುಭವ ಗೋಷ್ಠಿ’ಗಳು ನಮ್ಮೆಲ್ಲರನ್ನು ಒಗ್ಗೂಡಿಸುವುದರ ಜೊತೆಯಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ನೆನಪಿಸುತ್ತವೆ. ನಮ್ಮೆಲ್ಲರ ಹಿರಿಯರಾಗಿದ್ದ ಶ್ರೀ ಎನ್. ತಿಪ್ಪಣ್ಣ ಅವರ ವೀರಶೈವ – ಲಿಂಗಾಯತ ಒಳಪಂಗಡಗಳು ಒಗ್ಗೂಡುವ ಮೂಲಕ ಅವರ ಜೀವನದ ಆಶಯವನ್ನು ಪಾಲಿಸೋಣ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಜಿ.ಟಿ. ಫೌಂಡೇಶನ್‍ನ ಅಧ್ಯಕ್ಷರು, ವಕೀಲರು ಆಗಿರುವ ತಿಮ್ಮಪ್ಪ ಜೋಳದರಾಶಿ ಅವರು, ಸಮಾಜಮುಖಿ ಸೇವೆಗಳನ್ನು ಕೈಗೊಂಡಿರುವ ಶ್ರೀಮಠವು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಸೇವೆ ಸಲ್ಲಿಸುತ್ತಿದೆ ಎಂದರು.

ಇಂದುಮತಿ ಪಾಟೀಲ್ ಮತ್ತು ಡಾ. ರೇಣುಕಾ ಮಂಜುನಾಥ್ ಅವರು ಶ್ರೀಯುತ ಎನ್. ತಿಪ್ಪಣ್ಣ ಅವರ ಜೀವನ – ಸಾಧನೆ ಮತ್ತು ಸಾರ್ಥಕತೆಯ ಕುರಿತು ಮಾತನಾಡಿ, ನಮನ ಸಲ್ಲಿಸಿದರು. ಶ್ರೀಯುತರ ಆತ್ಮಕ್ಕೆ ಶಾಂತಿಕೋರಿ ಎರೆಡು ನಿಮಿಷ ಮೌನಾಚರಣೆ ಆಚರಿಸಲಾಯಿತು.

ಅಕ್ಕನ ಬಳಗದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಸಹ ಶಿಕ್ಷಕಿ ಶ್ರೀಮತಿ ಈರಮ್ಯ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೊಡ್ಡಬಸವ ಗವಾಯಿಗಳು ಹಾಗೂ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ಇಂದುಮತಿ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ಎಫ್‍ಕೆಸಿಸಿಐ 98ನೇ ವಾರ್ಷಿಕ ಸಭೆ : ಬಳ್ಳಾರಿ ಜಿಲ್ಲೆಯ ಮೂಲಭೂತ ಸೌಲಭ್ಯಗಳಿಗಾಗಿ ಮನವಿ
ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಎಡಿಸಿ ಸೋಮಲಿಂಗ ಗೆಣ್ಣೂರ ಸೂಚನೆ
ಸರ್ವೆ ಮೂಲಕ ಜನರ ನಾಡಿಮಿಡಿತ ತಿಳಿಯಲು ಮುಂದಾದ ಬಿಜೆಪಿ
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ : ರೈತರಿಗೆ ಸೂಚನೆ
ನಾಳೆ ವಿಜಯಪುರ ನಗರದಲ್ಲಿ ಮದ್ಯ ಮಾರಾಟ ನಿಷೇಧ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಹಳಿ ತಪ್ಪಿದ ಸರಕು ರೈಲು : ರೈಲುಗಳ ಮಾರ್ಗ ಬದಲಾವಣೆ
Next Article ಯುದ್ಧ ವಿಮಾನ ಎಂಜಿನ್ ಅಭಿವೃದ್ಧಿಗೆ ಫ್ರಾನ್ಸ್ ಸಹಕಾರ : ರಕ್ಷಣಾ ಸಚಿವಾಲಯ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?