
ರಾಯಚೂರು,, 17 ಜನವರಿ(ಹಿ.ಸ):
ಆ್ಯಂಕರ್: 2023-24 ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಫಲಾನುಭವಿ ಆಧಾರಿತ ಯೋಜನೆಯಾದ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಲಕರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ನಿಗಧಿತ ಅರ್ಜಿ ನಮೂನೆಯೊಂದಿಗೆ ಜಿಲ್ಲೆಯ ಆಯಾ ತಾಲ್ಲೂಕಿನ ಗ್ರಾಮೀಣ ಮಟ್ಟದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ನಗರ ಪುನರ್ವಸತಿ ಕಾರ್ಯಕರ್ತರನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ತಮ್ಮ ಅರ್ಜಿಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಿರಷ್ಕರಿಸಲಾಗುವುದು.
ಅರ್ಜಿಗೆ ಲಗತ್ತಿಸಬೇಕಾದ ದಾಖಲಾತಿಗಳು: ನಿಗಧಿತ ಅರ್ಜಿ ನಮೂನೆ. & ಭಾವಚಿತ್ರ-1, ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳು ವಾಸವಿರುವ ಬಗ್ಗೆ ತಹಶೀಲ್ದಾರರಿಂದ ವಾಸಸ್ಥಳ ಪ್ರಮಾಣ ಪತ್ರ ಲಗತ್ತಿಸಬೇಕು. ಕುಟುಂಬದ ವಾರ್ಷಿಕ ವರಮಾನ 2 ಲಕ್ಕಕ್ಕಿಂತ ಕಡಿಮೆ ಇರುವ ಕುಟುಂಬಗಳಲ್ಲಿರುವ ವಿಕಲಚೇತನರು ಅರ್ಜಿ ಸಲ್ಲಿಸಬಹುದು.
(ತಹಶೀಲ್ದಾರರಿಂದ ಪಡೆದ ಚಾಲ್ತಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ), ವಿಕಲಚೇತನರ ಅಧಿನಿಯಮದಡಿಯಲ್ಲಿ ಸೂಚಿಸಿರುವ ಹಾಗೂ ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿಯೊಂದಿಗೆ ದೃಢೀಕೃತ ವೈದ್ಯಕೀಯ ಪ್ರಮಾಣ ಪತ್ರ (ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ) ಸಲ್ಲಿಸಬೇಕು.
ಹಾಗೂ ಇತರೆ ಇಲಾಖೆಗಳಲ್ಲಿ ಅಥವಾ ಸಂಘ-ಸಂಸ್ಥೆಗಳಿಂದ ಬ್ಯಾಟರಿ ಚಾಲಿತ ವ್ಹೀಲ್ಚೇರ್ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಈ ಯೋಜನೆ ಪಡೆಯಲು ಅರ್ಹರಾಗಿರುವುದಿಲ್ಲ. ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಸರ್ಕಾರದಿಂದ ಯಂತ್ರಚಾಲಿತ ದ್ವಿಚಕ್ರವಾಹನವನ್ನು ಪಡೆದಿರಬಾರದು. ಬ್ಯಾಟರಿಚಾಲಿತ ವ್ಹೀಲ್ಚೇರ್ನ್ನು ಅವರ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ಪರಬಾರೆ ಮಾಡಬಾರದು.
ಮಾಡಿದ್ದಲ್ಲಿ ಕಂಡು ಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಶೇ.75%ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿದ್ದು, ಯಂತ್ರಚಾಲಿತ ದ್ವಿಚಕ್ರವಾಹನವನ್ನು ಚಾಲನೆ ಮಾಡಲು ಸಾಮಥ್ರ್ಯ ಹೊಂದಿರದ ಹಾಗೂ ಕನಿಷ್ಠ ಒಂದು ಕೈ ಒಂದು ಕಣ್ಣು ಸ್ವಾಧೀನದಲ್ಲಿದ್ದು, ಹಾಗೂ ಬ್ಯಾಟರಿಚಾಲಿತ ಚೇರ್ ಚಲಾಯಿಸಲು ಇತರೇ ಎಲ್ಲಾ ರೀತಿಯಲ್ಲಿ ಸಧೃಢವಾಗಿರುವ ವಿಕಲಚೇತನರಾಗಿರಬೇಕು.
