ದೆಹಲಿ, 17 ಜನವರಿ(ಹಿ.ಸ):
ಆ್ಯಂಕರ್ :
ರಾಷ್ಟ್ರಪತಿ ದ್ರೌಪದಿ ಮುರ್ಮು, ಇಂದು ಅಸ್ಸಾಂನ ಕರ್ಬಿಆಂಗ್ಲಾಂಗ್ ಜಿಲ್ಲೆಯಲ್ಲಿ ಕರ್ಬಿ ಯುವಜನೋತ್ಸವದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಸ್ಸಾಂ ರಾಜ್ಯಪಾಲರಾದ ಗುಲಾಬ್ಚಂದ್ ಕಟಾರಿಯ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾಗವಹಿಸಲಿದ್ದಾರೆ. ಕರ್ಬಿ ಯುವಜನೋತ್ಸವ ಈಶಾನ್ಯ ಭಾರತದ ಅತಿ ದೊಡ್ಡ ಮತ್ತು ಹಳೆಯದಾದ ಉತ್ಸವವಾಗಿದ್ದು, ಪ್ರಮುಖವಾಗಿ ಕರ್ಬಿ ಜನಾಂಗ ಇದನ್ನು ಆಚರಿಸುತ್ತದೆ. ಮೂರು ದಿನಗಳ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ರಾಷ್ಟ್ರಪತಿಯವರು ಇಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಬಳಿಕ ಅವರು, ಎರಡು ದಿನ ಮೇಘಾಲಯ ಭೇಟಿ ಕೈಗೊಳ್ಳುವರು.
ಹಿಂದೂಸ್ತಾನ್ ಸಮಾಚಾರ್
