ಬೆಳಗಾವಿ, 15 ಡಿಸೆಂಬರ್(ಹಿ.ಸ):
ಆ್ಯಂಕರ್ :ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದು ಕೊನೆಗೊಳ್ಳಲಿದೆ. ಅಧಿವೇಶನದಲ್ಲಿ ಅನೇಕ ವಿಚಾರಗಳು ಪ್ರಸ್ತಾಪವಾದರೆ, ಮತ್ತೆ ಕೆಲವು ವಿಷಯಗಳು ಕುರಿತ ಚರ್ಚೆಯೇ ಆಗಿಲ್ಲ. ಅಧಿವೇಶನ ಡಿಸೆಂಬರ್ 4 ರಿಂದ ಆರಂಭವಾಗಿದ್ದು ಈವರೆಗೆ ಉಪಯುಕ್ತ ಚರ್ಚೆಗಿಂತ ಗದ್ದಲ ಕೋಲಾಹಲದಲ್ಲೇ ಸದನ ಮುಳುಗಿಹೋಗಿದೆ. ಚರ್ಚೆಯಾಗಬೇಕಾದ ಸಾಕಷ್ಟು ವಿಚಾರಗಳು ಹಾಗೇ ಉಳಿದುಕೊಂಡಿವೆ.
ಹಿಂದೂಸ್ತಾನ್ ಸಮಾಚಾರ್
