
ಬೆಂಗಳೂರು, 29ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಬೆಂಗಳೂರಿನಲ್ಲಿ ಎರಡು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಿಎಸ್ಎಫ್ ಸಿಬ್ಬಂದಿ ಸುಧಾಕರ್, ಯುಟ್ಯೂಬರ್ ಗಣಿ ಸಾವು. ಕೆಲಸ ಮುಗಿಸಿ ಬಿಎಸ್ಎಫ್ ಕಾಂಪೌಂಡ್ನಿಂದ ಸುಧಾಕರ್ ಅವರು ಹೊರ ಬರುತ್ತಿದ್ದರು. ಈ ವೇಳೆ ಸುಧಾಕರ್ ಬೈಕ್ಗೆ ಮತ್ತೊಬ್ಬ ಬುಲೆಟ್ ಸವಾರ ಡಿಕ್ಕಿಹೊಡೆದಿದ್ದಾನೆ. ಬುಲೆಟ್ ಸವಾರನ ಡಿಕ್ಕಿಯಿಂದಾಗಿ ಸವಾರ ಸುಧಾಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಬ್ಬ ಸವಾರ ಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
