ಕೊಪ್ಪಳ, 11 ಜನವರಿ(ಹಿ.ಸ):
ಆ್ಯಂಕರ್ : ವಸತಿ ಯೋಜನೆಯ ಮನೆಗಳಿಗೆ ಗ್ರಾಮ ಪಂಚಾಯತಿಗಳಲ್ಲಿ ಜಿ.ಪಿ.ಎಸ್ ಅಳವಡಿಸುವ ಕುರಿತಂತೆ ಜನವರಿ 17 ಮತ್ತು ಜ.18ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ವಿವಿಧ ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಹಾಗೂ ಅಪೂರ್ಣಗೊಂಡ ಮನೆಗಳ ಪ್ರತಿಯೊಬ್ಬ ಫಲಾನುಭವಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೋಟಿಸ್ ಜಾರಿ ಮಾಡಿ ಮನೆಗಳನ್ನು ಪೂರ್ಣಗೊಳಿಸಲು ಆಯಾ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಎಂಪಿಐಸಿ ವರದಿ ಆಧಾರಿತ ಇನ್ನೂ ಪ್ರಾರಂಭಿಸದೇ ಇರುವ ಮನೆಗಳು 2950, ತಳಪಾಯ ಹಂತದಲ್ಲಿರುವ 4293, ಲಿಂಟಲ್ ಹಂತದಲ್ಲಿರುವ 3406 ಹಾಗೂ ಛಾವಣಿ ಹಂತದ 1232 ಮನೆಗಳು ಪ್ರಗತಿಯಲ್ಲಿವೆ. ಜಿಲ್ಲೆಯ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಪ್ರಗತಿಯಲ್ಲಿರುವ ಮನೆಗಳನ್ನು (ಛಾವಣಿ ಮತ್ತು ರೂಫ್) ಹಾಗೂ 2021-22ನೇ ಸಾಲಿನ ಪ್ರಾರಂಭಿಸದೇ ಇರುವ ಮನೆಗಳನ್ನು ಪ್ರಾರಂಭಿಸಿ ಜ.17 ಮತ್ತು ಜ.18ರಂದು ಬೆಳಿಗ್ಗೆ 08 ಗಂಟೆಯಿಂದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಖುದ್ದಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಪಿಎಸ್ ಮುಖಾಂತರ ಮನೆಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ
