ಬೆಂಗಳೂರು, 21 ಡಿಸೆಂಬರ್(ಹಿ.ಸ):
ಆ್ಯಂಕರ್ :
ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳು ಏರುಮುಖವಾಗಿರುವ ನಡುವೆಯೇ, ರಾಜ್ಯದಲ್ಲೂ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಏರಿದೆ. 2041 ಸಕ್ರಿಯ ಪ್ರಕರಣಗಳೊಂದಿಗೆ ನೆರೆಯ ಕೇರಳ ಮೊದಲ ಸ್ಥಾನದಲ್ಲಿದ್ದರೆ, 92 ಪ್ರಕರಣಗಳೊಂದಿಗೆ ಕರ್ನಾಟಕ 2ನೇ ಸ್ಥಾನ ತಲುಪಿರುವುದು ಆತಂಕ ಮೂಡಿಸಿದೆ. ದೇಶದಲ್ಲಿ ನಿತ್ಯ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿವೆ. ಪರಿಣಾಮ ಡಿ.6ರಂದು ಕೇವಲ 587 ಇದ್ದ ಸಕ್ರಿಯ ಪ್ರಕರಣ ಡಿ.20ರ ಮಧ್ಯಾಹ್ನ 12 ಗಂಟೆ ವೇಳೆಗೆ 2311ಕ್ಕೆ ತಲುಪಿದೆ. ಅಂದರೆ ಕೇವಲ ಎರಡೇ ವಾರದಲ್ಲಿ ಆರು ಪಟ್ಟು ಹೆಚ್ಚಾಗಿದೆ.
ದಿನೇ ದಿನೇ ಹೆಚ್ಚಳ: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಶೇ.1.72 ಪಾಸಿಟಿವಿಟಿ ದರದಂತೆ ಸರಾಸರಿ 17 ಪ್ರಕರಣ ವರದಿಯಾಗುತ್ತಿವೆ. ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಈ ಪೈಕಿ ಡಿ.18 ರಂದು ಒಂದೇ ದಿನ 27 ಪ್ರಕರಣ ವರದಿಯಾಗಿದ್ದರೆ, ಡಿ.19 ರಂದು 44 ಪ್ರಕರಣ ವರದಿಯಾಗಿವೆ. ಡಿ.20 ರಂದು 22 ಪ್ರಕರಣ ವರದಿಯಾಗಿವೆ.
ಹಿಂದೂಸ್ತಾನ್ ಸಮಾಚಾರ್
