ಬೆಂಗಳೂರು, 13 ಜನವರಿ(ಹಿ.ಸ):
ಆ್ಯಂಕರ್ :
: ಕಲ್ಲಿದ್ದಲು ಅನಿಲೀಕರಣ ಯೋಜನೆಯನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಮುಂದಿಡಲಾಗುವುದು. ನಂತರ ಔಪಚಾರಿಕವಾಗಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಭೂಗತ ಕಲ್ಲಿದ್ದಲು ಅನೀಲಿಕರಣ ಯೋಜನೆಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು. ವಾಣಿಜ್ಯ ಗಣಿಗಳಲ್ಲಿ ಭೂಗತ ಗಣಿಗಾರಿಕೆ ಮಾಡುವವರಿಗೆ ಕೇಂದ್ರ ಸರ್ಕಾರ ಆಯಾ ರಾಜ್ಯಗಳೊಂದಿಗೆ ಆದಾಯ ಹಂಚಿಕೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡುತ್ತದೆ ಎಂದಿದ್ದಾರೆ.
ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಮೂಲಕ ಭೂಗತ ಗಣಿಗಾರಿಕೆಗೆ ಪ್ರವೇಶಿಸುವವರಿಗೆ ಈ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಮೇಲ್ಮೈ ಗಣಿಗಾರಿಕೆಗೆ ಹೋಲಿಸಿದರೆ ಭೂಗತ ಗಣಿಗಾರಿಕೆ ಕಡಿಮೆ ಮಾಲಿನ್ಯಕಾರಕವಾಗಿದೆ. ಹಾಗಾಗಿ ಇದನ್ನು ಪ್ರೋತ್ಸಾಹಿಸಲು ಭವಿಷ್ಯದಲ್ಲಿ ಈ ಸಬ್ಸಿಡಿ (ಸಹಾಯಧನ) ಹೆಚ್ಚಿಸಲೂ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಕಲ್ಲಿದ್ದಲು ಸಚಿವಾಲಯದ ಪಿಎಸ್ಯುಗಳು ಒಟ್ಟಾಗಿ 2030ರ ವೇಳೆಗೆ 12 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಲು ಯೋಜಿಸಲಾಗಿದೆ. ಭಾರತವು ಪ್ರಸ್ತುತ ತೆರೆದ ಗಣಿಗಾರಿಕೆ ವಿಧಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭೂಗತ ಗಣಿಗಾರಿಕೆ ಪ್ರಸ್ತುತ ಭಾರತದ ಒಟ್ಟು ಕಲ್ಲಿದ್ದಲು ಗಣಿಗಾರಿಕೆ ಉತ್ಪಾದನೆಯಲ್ಲಿ ಕೇವಲ 4 ಪ್ರತಿಶತದಷ್ಟಿದ್ದು ಇದನ್ನು ಹೆಚ್ಚಿಸಲು ಯೋಜಿಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
