
ಜೈಪುರ್, 3 ಜನವರಿ(ಹಿ.ಸ):
ಆ್ಯಂಕರ್ :ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಮತ್ತು ರಾಜಸ್ಥಾನದ 31 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಳಿ ನಡೆಸುತ್ತಿದೆ. ಗೃಹ ಸಚಿವಾಲಯ (ಎಂಎಚ್ಎ) ಇತ್ತೀಚೆಗೆ ಹತ್ಯೆಯ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಿತ್ತು . ಕೊಲೆಯಲ್ಲಿ ಹೈಪ್ರೊಫೈಲ್ ಗ್ಯಾಂಗ್ಸ್ಟರ್ ಕೈವಾಡವನ್ನು ಪರಿಗಣಿಸಿ ತನಿಖಾ ಸಂಸ್ಥೆಗೆ ತನಿಖೆಯ ಜವಾಬ್ದಾರಿಯನ್ನು ನೀಡಲಾಯಿತು.
ಪ್ರಕರಣವನ್ನು ಕೈಗೆತ್ತಿಕೊಂಡ ನಂತರ ಎನ್ಐಎ ಶಂಕಿತರನ್ನು ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ವೇಳೆ ಸಿಕ್ಕ ಮಾಹಿತಿ ಮೇರೆಗೆ ದಾಳಿ ನಡೆಸಲಾಗುತ್ತಿದೆ. ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಡಿಸೆಂಬರ್ 5 ರಂದು ಜೈಪುರದ ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು .
ಘಟನೆಯ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಬಂಧ ಹೊಂದಿರುವ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ಫೇಸ್ಬುಕ್ ಪೋಸ್ಟ್ನಲ್ಲಿ ಗೊಗಮೆಡಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ. ಕೊಲೆಯಾಗುವ ಕೆಲವು ತಿಂಗಳ ಹಿಂದೆ ರೋಹಿತ್ ಗೋದಾರಾ ಎಂಬಾತ ಸುಖದೇವ್ ಸಿಂಗ್ ಗೊಗಮೆಡಿಗೆ ದುಬೈ ಸಂಖ್ಯೆಯಿಂದ ಬೆದರಿಕೆ ಕರೆ ಮಾಡಿದ್ದ.
ಹಿಂದೂಸ್ತಾನ್ ಸಮಾಚಾರ್
