ಹಮಾಸ್, 3 ಜನವರಿ(ಹಿ.ಸ):
ಆ್ಯಂಕರ್ :
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ವೇಳೆ ಬೈರಟ್ನಲ್ಲಿ ಇಸ್ರೇಲ್ ಡ್ರೋನ್ ದಾಳಿಯಲ್ಲಿ ಹಮಾಸ್ನ ಉಪ ನಾಯಕ ಸಲೇಹ್ ಅಲ್ ಅರೌರಿ ಹತನಾಗಿದ್ದಾನೆ. ಹಮಾಸ್ನ ಉಪ ನಾಯಕನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ಐಡಿಎಫ್ ತಿಳಿಸಿದೆ. ಇದೇ ವೇಳೆ ಉಗ್ರ ಸಂಘಟನೆ ಹಮಾಸ್ ಸಹ ಇಸ್ರೇಲ್ ತನ್ನ ಉಪ ನಾಯಕ ಸಲೇಹ್ ಅಲ್ ಅರೌರಿ ಹತ್ಯೆ ಮಾಡಿರುವುದಾಗಿ ಸ್ಪಷ್ಟಪಡಿಸಿದೆ. ಲೆಬನಾನ್ ನಿಯೋಜಿತ ಪ್ರಧಾನಿ ನಾಜಿಬ್ ಮಿಕಾಟಿ, ೫೭ ವರ್ಷದ ಲೆಬನಾನ್ ನಿವಾಸಿಯಾಗಿದ್ದ ಹಮಾಸ್ ಉಪ ನಾಯಕ ಸಲೇಹ್ ಅಲ್ ಅರೌರಿ ಹತ್ಯೆಯನ್ನು ಖಂಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
