ನವದೆಹಲಿ
ದೆಹಲಿ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ನಗರ ಎನಿಸಿಕೊಂಡಿದೆ. ಹೊಸ ವರದಿಯ ಪ್ರಕಾರ, ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದೆ, ಆದರೆ ದೆಹಲಿಯು ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟ ಹೊಂದಿರುವ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.
ದೇಶದಲ್ಲಿ ಅದೆಷ್ಟೋ ನಗರಗಳು ಮಾಲಿನ್ಯದಲ್ಲಿ ಮುಳುಗಿ ಹೋಗಿವೆ. ಆದರೂ ರಾಜಧಾನಿ ದೆಹಲಿ ಎಲ್ಲಾ ನಗರಗಳನ್ನೂ ಮೀರಿಸಿ ಮುನ್ನುಗ್ಗುತ್ತಿದೆ. ಅಲ್ಲಿ ವಾಸ ಮಾಡುವ ಜನಗಳಿಗೆ ಉಸಿರು ಬಿಗಿಹಿಡಿದು ಬದುಕುವ ಪರಿಸ್ಥಿತಿ ಇದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನ ನರಕ ಎಂದು ಕರೆಯುವುದು ಮಾಮೂಲು. ಏಕೆಂದರೆ ಅಲ್ಲಿ ಹೊಗೆ, ಮಂಜು ದೆಹಲಿ ಜನರನ್ನ ಇನ್ನಿಲ್ಲದ ರೀತಿ ಬಾಧಿಸುತ್ತದೆ.ದೆಹಲಿ ನಿವಾಸಿಗಳ ಪೈಕಿ ಬಹುತೇಕರು ಚಳಿಗಾಲ ಬಂದಾಗ ದಕ್ಷಿಣ ಭಾರತ ಅಥವಾ ಈಶಾನ್ಯ ಭಾರತದ ಕಡೆ ಪ್ರಯಾಣ ಬೆಳೆಸುತ್ತಾರೆ. ಪ್ರತಿ ಘನ ಮೀಟರ್ಗೆ ಸರಾಸರಿ 54.4 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ, ಬಾಂಗ್ಲಾದೇಶ (ಪ್ರತಿ ಘನ ಮೀಟರ್ಗೆ 79.9 ಮೈಕ್ರೊಗ್ರಾಂ) ಮತ್ತು ಪಾಕಿಸ್ತಾನ (73.7 ಮೈಕ್ರೋಗ್ರಾಂ ಪ್ರತಿ ಘನ ಮೀಟರ್) ನಂತರ 2023 ರಲ್ಲಿ 134 ದೇಶಗಳಲ್ಲಿ ಭಾರತವು ಮೂರನೇ-ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿತ್ತು.
