
ನವದೆಹಲಿ, 27 ನವೆಂಬರ್ (ಹಿ.ಸ):
ಆ್ಯಂಕರ್ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಬೆಂಬಲಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ’ಮೇರಿ ಕಹಾನಿ ಮೇರಿ ಜುಬಾನಿ’ ಉಪಕ್ರಮದ ಅಡಿಯಲ್ಲಿ ಸಚಿವಾಲಯ ಪಾಲ್ಗೊಳ್ಳುತ್ತಿದೆ. ಅಂಗನವಾಡಿ ಸೇವೆಗಳ ಕುರಿತ ತಮ್ಮ ಅನುಭವಗಳನ್ನು ಮತ್ತು ಅವರ ಜೀವನದ ಮೇಲೆ ಸೇವೆಗಳು ಬೀರಿದ ಪ್ರಭಾವ ಕುರಿತು ಮಾತನಾಡಲು ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಫಲಾನುಭವಿಗಳನ್ನು ನೋಂದಾಯಿಸುವ ಗುರಿಯನ್ನು ಸಚಿವಾಲಯ ಹೊಂದಿದೆ. ಇದುವರೆಗೂ ೧ ಸಾವಿರದ ೮೦೦ಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ವಿವಿಧ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ನೀಡುವ ಉದ್ದೇಶವನ್ನು ಈ ಯಾತ್ರೆ ಹೊಂದಿದ್ದು, ಸಂಬಂಧಿತ ಯೋಜನೆಗಳಿಗೆ ಸೇರ್ಪಡೆಗೊಳ್ಳಲು ಜನರನ್ನು ಪ್ರೇರೇಪಿಸುತ್ತದೆ. ಈ ಯಾತ್ರೆಗಳಲ್ಲಿ ಸ್ವಸ್ತ್ ಬಾಲಕ ಸ್ಪರ್ಧೆವನ್ನು ಕೈಗೊಳ್ಳಲು ಮತ್ತು ಆರೋಗ್ಯವಂತ ಮಕ್ಕಳನ್ನು ಸನ್ಮಾನಿಸುವಂತೆ ಸಚಿವಾಲಯವು ರಾಜ್ಯಗಳನ್ನು ಕೇಳಿದೆ. ಈ ಉಪಕ್ರಮವು ೦ ರಿಂದ ೬ ವರ್ಷ ವಯೋಮಾನದ ಗುಂಪಿನ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಮತ್ತು ಆರೋಗ್ಯವಂತರಾಗಿರಲು ಪೋಷಕರು ಮತ್ತು ಮಕ್ಕಳಲ್ಲಿ ಧನಾತ್ಮಕ ಸ್ಪರ್ಧಾತ್ಮಕತೆಯನ್ನು ಇದು ಹುಟ್ಟುಹಾಕುತ್ತದೆ.
ಹಿಂದೂಸ್ತಾನ್ ಸಮಾಚಾರ್
