ನವದೆಹಲಿ, 16ಅಕ್ಟೋಬರ್ (ಹಿ.ಸ):
ಆ್ಯಂಕರ್ :
ನವದೆಹಲಿಯಲ್ಲಿಂದು ಸೇನಾ ಕಮಾಂಡರ್ಗಳ ಸಮ್ಮೇಳನ ಆರಂಭಗೊಂಡಿದೆ. ಸೇನಾ ಹಂತದ ದ್ವೈವಾರ್ಷಿಕ ಸಮ್ಮೇಳನವು ಪರಿಕಲ್ಪನಾ ಮಟ್ಟದ ಚರ್ಚೆಗಳಿಗೆ ಸಾಂಸ್ಥಿಕ ವೇದಿಕೆಯಾಗಿದ್ದು, ಭಾರತೀಯ ಸೇನೆಯ ಪ್ರಮುಖ ನೀತಿ ನಿರ್ಧಾರಗಳನ್ನು ಸುಗಮಗೊಳಿಸುತ್ತದೆ. ಐದು ದಿನಗಳ ಸಮ್ಮೇಳನದಲ್ಲಿ, ಸೇನಾ ಕಮಾಂಡರ್ಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಚರ್ಚೆಗಳನ್ನು ಭೌತಿಕ ಸ್ವರೂಪದಲ್ಲಿ ನಡೆಸಲಿದ್ದಾರೆ. ಸೇನಾ ನಾಯಕತ್ವವು ಭಾರತೀಯ ಸೇನೆಯ ಕಾರ್ಯಾಚರಣೆಯ ಸನ್ನದ್ಧತೆಯನ್ನು ಮತ್ತು ಉತ್ತಮ ಭದ್ರತಾ ಸನ್ನಿವೇಶಗಳನ್ನು ಪರಿಶೀಲಿಸಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಕಮಾಂಡರ್ಗಳ ಸಮ್ಮೇಳನವು ಅದರ ವಿಶಾಲ ವ್ಯಾಪ್ತಿಯೊಂದಿಗೆ, ಭಾರತೀಯ ಸೇನೆ ಪ್ರಗತಿಪರ, ಭವಿಷ್ಯದ ಮತ್ತು ಹೊಂದಿಕೊಳ್ಳುವ ಸ್ಥಿತಿಗೆ ಸಿದ್ಧವಾಗಿದೆ ಎಂದು ಖಚಿತಪಡಿಸುತ್ತದೆ. ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಬುಧವಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ವಾಯು ಸಿಬ್ಬಂದಿ ಮುಖ್ಯಸ್ಥ ವಿ.ಆರ್ ಚೌಧರಿ ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಅಜಯ್ ಕುಮಾರ್ ಸೂದ್ ಅವರು “ರಾಷ್ಟ್ರೀಯ ಭದ್ರತೆಗಾಗಿ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ಉಪನ್ಯಾಸ ನೀಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
