ಮುಂಬೈ, 29ಅಕ್ಟೋಬರ್ (ಹಿ.ಸ):
ಆ್ಯಂಕರ್ :
: ಡಬ್ಬಲ್ ಡೆಕ್ಕರ್ ಡೀಸೆಲ್ ಬಸ್ಗಳ ಓಡಾಟ ಅಂತ್ಯಗೊಂಡ ಬೆನ್ನಲ್ಲೇ ಮುಂಬೈ ನಗರದ ಜೊತೆ ಗುರುತಿಸಿಕೊಂಡಿದ್ದ ‘ಪ್ರೀಮಿಯರ್ ಪದ್ಮಿನಿ’ ಟ್ಯಾಕ್ಸಿ ಸೇವೆಯೂ ಸಹ ಅಂತ್ಯಗೊಂಡಿದೆ. ಕಪ್ಪು ಹಾಗೂ ಹಳದಿ ಬಣ್ಣದ ಈ ಕಾರುಗಳು ಸೋಮವಾರದಿಂದ ರಸ್ತಗಿಳಿಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕಾಲಿ ಪೀಲಿ’ ಎಂಬ ಹೆಸರಿನೊಂದಿಗೆ ಮುಂಬೈ ಜನರ ಜೊತೆಗಾರರಾಗಿದ್ದ ಈ ಟ್ಯಾಕ್ಸಿ ಭಾನುವಾರ ಕೊನೆಯದಾಗಿ ರಸ್ತೆಗಳಿಯಲಿದೆ. 2003ರಲ್ಲಿ ಕೊನೆಯ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿ ನೋಂದಣಿಗೊಂಡಿತ್ತು. ಈ ವಾಹನಗಳಿಗೆ 20 ವರ್ಷಗಳ ಕಾಲ ಮಿತಿ ಇರುವುದರಿಂದ ಅವಧಿ ಮುಕ್ತಾಯವಾದ ಕಾರು ಸೇವೆಯನ್ನು ನಿಲ್ಲಿಸಲಿದೆ. ‘ಇದೀಗ ಆ್ಯಪ್ಗಳ ಮುಖಾಂತರ ಸೇವೆ ಒದಗಿಸುವ ಕಾರುಗಳು ಮುಂಬೈ ರಸ್ತೆಯನ್ನು ಆಕ್ರಮಿಸಿದ್ದು, ಈ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದು ಮುಂಬೈನ ಗೌರವವಾಗಿತ್ತು. ನಮಗೆ ಜೀವನವಾಗಿತ್ತು’ ಎಂದು ಕೊನೆಯ ಕಾರು ಹೊಂದಿದ್ದ ಕಾರಿನ ಮಾಲಿಕ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
