ರಾಯಪುರ್, 22 ಡಿಸೆಂಬರ್(ಹಿ.ಸ):
ಆ್ಯಂಕರ್ :
ಛತ್ತೀಸ್ ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಶುಕ್ರವಾರ ಒಂಬತ್ತು ಹೊಸ ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ತಮ್ಮ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಬಿಜೆಪಿ ಶಾಸಕರಾದ ಬ್ರಿಜ್ಮೋಹನ್ ಅಗರವಾಲ್, ರಾಮ್ವಿಚಾರ್ ನೇತಮ್, ದಯಾಳ್ದಾಸ್ ಬಾಘೇಲ್, ಕೇದಾರ್ ಕಶ್ಯಪ್, ಲಖನ್ಲಾಲ್ ದೇವಾಂಗನ್, ಶ್ಯಾಮ್ ಬಿಹಾರಿ ಜೈಸ್ವಾಲ್, ಒಪಿ ಚೌಧರಿ, ಟ್ಯಾಂಕ್ ರಾಮ್ ವರ್ಮಾ ಮತ್ತು ಲಕ್ಷ್ಮಿ ರಾಜವಾಡೆ ಅವರಿಗೆ ರಾಜ್ಯಪಾಲ ಬಿಸ್ವಭೂಷಣ ಹರಿಚಂದನ್ ಪ್ರಮಾಣ ವಚನ ಬೋಧಿಸಿದರು.
ನೂತನ ಸಚಿವರ ಸೇರ್ಪಡೆಯಿಂದಾಗಿ ಸಾಯಿ ನೇತೃತ್ವದ ಸಂಪುಟದಲ್ಲಿ ಸಚಿವರ ಸಂಖ್ಯೆ 12 ಆಗಿದೆ. ಡಿಸೆಂಬರ್ 13 ರಂದು ಮುಖ್ಯಮಂತ್ರಿ ಸಾಯಿ ಮತ್ತು ಉಪ ಮುಖ್ಯಮಂತ್ರಿಗಳಾದ ಅರುಣ್ ಸಾವೊ ಮತ್ತು ವಿಜಯ್ ಶರ್ಮಾ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಸ್ತುತ ಸಚಿವ ಸಂಪುಟದಲ್ಲಿ ಛತ್ತೀಸ್ಗಢ ಸಿಎಂ ಸೇರಿದಂತೆ ಗರಿಷ್ಠ 13 ಸಚಿವರನ್ನು ಹೊಂದಬಹುದು. ಶೀಘ್ರದಲ್ಲಿಯೇ ಪೋರ್ಟ್ಫೋಲಿಯೋಗಳನ್ನು ಹಂಚಿಕೆ ಮಾಡಲಾಗುವುದು. ಇನ್ನೂ ಒಂದು ಕ್ಯಾಬಿನೆಟ್ ಸ್ಥಾನವನ್ನು ನಂತರ ಭರ್ತಿ ಮಾಡಲಾಗುವುದು ಎಂದು ಸಾಯಿ ಸುದ್ದಿಗಾರರಿಗೆ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್
