ಗಂಗಾವತಿ, 22 ಡಿಸೆಂಬರ್(ಹಿ.ಸ):
ಆ್ಯಂಕರ್ :
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಹಿಂದೆ ಬಿ ಎಸ್ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದಾಗ ಭಾಗಿಯಾಗಿದ್ದ ಹಗರಣಗಳು ಏನೇ ಆಗಿರಲಿ, ಅವರೊಬ್ಬ ದೈವಭಕ್ತ ( ಅನ್ನೋದು ನಿರ್ವಿವಾದಿತ. ಅವರು ಕಳೆದ ವರ್ಷವೂ ಹನುಮ ಮಾಲೆ ಧರಿಸಿದ್ದನ್ನು ನಾವು ಹಿಂದೂಸ್ತಾನ್ ಸಮಾಚಾರ್ ನಲ್ಲಿ ವರದಿ ಮಾಡಿದ್ದೇವೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನ ಸಭಾ ಅಧಿವೇಶನದಲ್ಲಿ ಭಾಗಿಯಾಗಿ ಸ್ವಕ್ಷೇತ್ರಕ್ಕೆ ವಾಪಸ್ಸಾಗಿರುವ ಅವರು ಇಂದು ಬೆಳಗ್ಗೆ ಗಂಗಾವತಿಗೆ ಹತ್ತಿರದಲ್ಲಿರುವ ಪಂಪಾ ಸರೋವರದ ದಡದಲ್ಲಿ ಕುಳಿತು ಅರ್ಚಕರಿಂದ ಪೂಜಾ ವಿಧಿಗಳು ಪೂರ್ಣಗೊಂಡ ಬಳಿಕ ಹನುಮ ಮಾಲೆ ಧರಿಸಿದರು.
ಮಾಲೆಧಾರಿ ರೆಡ್ಡಿ ಸರೋವರದಿಂದ ಆಚೆ ಬರಿಗಾಲಲ್ಲಿ ನಡೆದು ಬರುವುದನ್ನು ದೃಶ್ಯಗಳಲ್ಲಿ ನೋಡಹುದು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜನಾರ್ಧನ ರೆಡ್ಡಿ, ಸರಿಯಾಗಿ ಒಂದು ವರ್ಷದ ನಂತರ ಹನುಮ ಮಾಲೆ ಧರಿಸಿರುವುದಾಗಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್
